"ದೇವರ ವರ, ಹುಡಿಗೀರ ಪ್ರೀತಿ ಎರಡೂ ಒಂದೇ, ವ್ಯತ್ಯಾಸ ಇಷ್ಟೇ ವರ ಬೇಕು ಅಂದ್ರೆ ನೂರಾರು ವರ್ಷ ಕಾಯಬೇಕು, ಪ್ರೀತಿಬೇಕು ಅಂದ್ರೆ ನೂರಾರು ಸಲ ಕಾಡಬೇಕು".
ಸುಮ್ಮನೆ ಒಮ್ಮೆ ಕಣ್ಣು ಮುಚ್ಚಿ ಏನೋ ಯೋಚಸುತ್ತಿರುವಾಗ ನನ್ನ ತಲೆಯಲ್ಲಿ ಮಿಂಚಿ ಮರೆಯಾದ ಆ ಸಾಲನ್ನು ನಿಮ್ಮ ಮುಂದೆ ಇಟ್ಟೆ ಅಷ್ಟೇ. ಚೆನ್ನಾಗಿದೆಯಲ್ಲ? ಪ್ರೀತಿ ಅಂದ್ರೆನೆ ಹಾಗೆ, ಚೆನ್ನಾಗಿಲ್ಲ ಇಲ್ಲದ್ದನ್ನೂ ಚೆನ್ನಾಗಿ ಮಾಡೋ ಅಮಲು, ಮನಸ್ಸಿನ ದುಖ: ದುಮ್ಮಾನಗಳನ್ನ ಒಮ್ಮೆ ಸುಟ್ಟು ಹಾಕೋ ಸಿಡಿಲು, ಏನೂ ಮಾಡಲು ಆಗುತ್ತಿಲ್ಲ ಅನ್ನೋ ಸುಳ್ಳು ಸೋಂಬೇರಿಯನ್ನ ಜಾಡಿಸಿ ಒದ್ದು ಎದೆಮುರಿ ಕಟ್ಟಿ ಜೀವನದಲ್ಲಿ ಏನೆಲ್ಲಾ ಮಾಡಲು ಸಾದ್ಯ ಎಂದು ತೋರಿಸೂ ಅಮ್ಮನ ಮಡಿಲು. ಒಂದೇ ಸಾಲಲ್ಲಿ ಹೇಳಬೇಕು ಅಂದ್ರೆ 'ದಿಕ್ಕು ದೆಸೆಯಿಲ್ಲದ ಎರಡು ತುಡಿವ ಹೃದಯಗಳ ಒಗ್ಗೂಡಿಸಿ ಸಾಧನೆಯ ಹಾದಿ ತೋರಿಸುವ ದಿಕ್ಸೂಚಿ'. ನನಗೆ ಎಸ್ಟೋ ಸಲ ಅನಿಸುತ್ತೆ ನನ್ನ ಪ್ರೀತಿ ಹೇಗಿರಬೇಕು ಅಂದ್ರೆ ನಾ ಮೆಚ್ಚಿದ ಹಿಡಿಗಿ ತನ್ನ ಎದೆಯ ಚಿಲುಮೆಯಿಂದ ಎರಡೂ ಕೈಗಳಿಂದ ತೋಡಿ ತೋಡಿ ಪ್ರೀತಿಯನ್ನ ನನಗೆ ಕೊಡಬೇಕು, ಅವಳು ಕೊಟ್ಟ ಬೊಗಸೆ ಪ್ರೀತಿಯನ್ನ ಹನಿ ಹನಿಯನ್ನೂ ಬಿಡದೆ ನಾ ಕುಡಿಬೇಕು, ಮತ್ತೊಮ್ಮೆ ಮಗದೊಮ್ಮೆ ನನ್ನ ಹುಡಿಗಿಯತ್ತ ಇನ್ನೊಂದು ಬೊಗಸೆ ಪ್ರೀತಿಗೋಸ್ಕರ ಕೈ ಚಾಚ ಬೇಕು. ಸವಿದಷ್ಟೂ ಸವಿಯಬೇಕು, ಕುಡಿದಷ್ಟೂ ಕುಡಿಬೇಕು, ಅನುಭವಿಸಿದಸ್ಟು ಇನ್ನೂ ಅನುಭವಿಸಬೇಕು ಅನಿಸುವ ಒಂದೇ ಒಂದು ಸಂಗತಿ ಅಂದ್ರೆ ಅದು 'ಪ್ರೀತಿ'.
ಇಂಥ ಅದ್ಭುತ ಪ್ರೀತಿ ಸಾಗರದಲ್ಲಿ ಮಿಂದು ನೆಂದು ಹಾಯಾಗಿ ಈಜುತಿರುವ ಕೋಟಿ ಕೋಟಿ ಲೆಕ್ಕವಿಡದಷ್ಟು ಪ್ರೇಮಿಗಳ ಲೆಕ್ಕವಿಡುವಷ್ಟು ವರ್ತನೆಗಳ ಬಗ್ಗೆ ಬರೀಬೇಕು ಅಂದುಕೊಂಡಿದ್ದೀನಿ. ಒಮ್ಮೊಮ್ಮೆ ಅನಿಸುತ್ತೆ ಪ್ರೀತಿನೆ ಹುಚ್ಚೂ ಇಲ್ಲ ಪ್ರೀಸುವವರು ಹುಚ್ಚರೋ ಅಂತ, ಪ್ರೀತಿನೆ ಕುರುಡೋ ಅಥವಾ ಪ್ರೀತಿಸುವವರು ಕುರಡರೋ ಅಂತ. ಹಗಲು ಮಾಸಿ ಮಬ್ಬೆರುವ ಸಂಜೆಯಲ್ಲಿ ಸುಖ ಸುಮ್ಮನೆ ಬೆಂಗಳೂರಿನ ಯಾವುದಾದರು ಒಂದು ಪಾರ್ಕ್ನಲ್ಲಿ ಹಾಗೆ ಸುತ್ತಿ ಬನ್ನಿ. ನಿಮಗೂ ನಾ ಹೇಳಿದ್ದು ಕಂಡಿತ ಸರಿ ಅನ್ನಿಸುತ್ತೆ. ಪ್ರಿಯತಮನ ಎದೆಗವಚಿಕೊಂಡು ಬಾಳಿನ ಸುಂದರ ಸ್ವಪ್ನಗಳನ್ನ ಕಾಣೋದು ತಪ್ಪಲ್ಲ. ಆದರೆ ಸ್ವಪ್ನದಲ್ಲಿ ತೆಳುತಿರುವಂತೆ ಸಾರ್ವಜನಿಕ ಸ್ತಳಗಳಲ್ಲಿ, ಪಾರ್ಕ್ ಗಳಲ್ಲಿ ಒಬ್ಬರಿಗೊಬ್ಬರು ಮುದ್ದಿಸೋದು, ಆಲಂಗಿಸೋದು, ನೋಡಲು ಅಸಯ್ಯವೆನಿಸುವಂತೆ ವರ್ತಿಸೋದು ತಪ್ಪು ಅಸ್ಟೇ ಅಲ್ಲ, ನೋಡುಗರಿಗೆ ಮುಜುಗರ ತರಿಸುತ್ತದೆ. ಎಲ್ಲ ಪ್ರೇಮಿಗಳು ಈ ರೀತಿ ವರ್ತಿಸುತ್ತಾರೆ ಅಂತ ನನ್ನ ವಾದ ಅಲ್ಲ, frank ಹಾಗಿ ಹೇಳ ಬೇಕು ಅಂದ್ರೆ, ನಿಜವಾದ ಪ್ರೀತಿ ಇರೋ ಕಡೆ ಕಾಮಕ್ಕೆ ಕೊನೆ ಸ್ತಾನ ಅಂತೆ. ಈ ರೀತಿ ವರ್ತಿಸುತಿರೋರು ಪ್ರೇಮಿಗಳು ಅಲ್ಲ ಪ್ರೇಮಿಗಳ ಹೆಸರಲ್ಲಿ, ಪ್ರೇಮದ ಅರ್ಥ ಕೆಡಿಸಲು ಇರುವ ಹುಚ್ಚರು. ಗೆಳೆಯರೇ ನೆನಪಿರಲಿ, ಜೀವನದ ಸಂಧ್ಯಾ ಕಾಲಾದಲ್ಲಿರುವ ಎಸ್ಟೋ ಹಿರಿ ಜೀವಿಗಳು ಪಾರ್ಕ್ ಗೆ ಬರುತ್ತಾರೆ, ನಿಮ್ಮ ಅಪ್ಪ ಅಮ್ಮನ ವಯಸ್ಸಿನವರೂ ಅಲ್ಲಿ ಕುಳಿತಿರುತ್ತಾರೆ, ನೀವೀಗೆ ಅಸಬ್ಯ್ಹವಾಗಿ ನಡೆದುಕೊಂಡರೆ ಎಷ್ಟು ಕೆತ್ತದಗಿರುತ್ತೆ ಅಲ್ಲವೇ? ಪ್ಲೀಸ್ ಅರ್ಥ ಮಾಡಿಕೊಳ್ಳಿ, ಈ ಪಾರ್ಕ್, ಗುಡಿಗಳಂತ ಸಾರ್ವಜನಿಕ ಸ್ತಳಗಳು ಇರೋದು ಸಾರ್ವಜನಿಕರ ಸದ್ಭಳಕೆಗೆ, ಸರಸಕ್ಕಾಗಿ ಅಲ್ಲ.
ಮತ್ತೊಂದು ಕೆಟ್ಟ ಚಾಳಿ ಕೆಲವೊಂದು ಪ್ರೇಮಿಗಳಲ್ಲಿ ಅಂದ್ರೆ ತಾವು ಹೋದ ಪಾರ್ಕ್, ಬೆಟ್ಟಗಳಲ್ಲಿ ತಮ್ಮ ಇಬ್ಬರ ಹೆಸರು ಕೆತ್ತೋದು, ಹೃದಯದ ಚಿತ್ರ ಬರೆಯೋದು. ಇವತ್ತು ಬಸ್ ನ ಕಿಟಿಕಿ, ಬಾಗಿಲು, ಆಸನದ ಹಿಂದೆ ಕೂಡ ಯಾರ್ಯಾರೋ ಇನ್ನ್ಯಾರನ್ನೋ ಪ್ರೆತಿಸುತ್ತೇವೆ ಅಂತ ಬರೆದಿರೋದನ್ನ ಕಾಣಬಹುದು, ಯಾಕೆ ಹೀಗೆ? ಪ್ರೀತಿ ಅನ್ನೋದು ತೀರ ತೀರ ಖಾಸಗಿ ವಿಷಯ, ಅದನ್ನ್ಯಾಕೆ ಊರ ಜನಕ್ಕೆ ಹೇಳಬೇಕು? ಹೇಳಿದರೆ ನಿಮ್ಮನ್ಯಾರು ಲೈಲಾ ಮಜ್ನು ಅಂತ ಕರಿಯಲ್ಲ. ನಿಮಗೇನಾದ್ರು ನಿಮ್ಮ ಪ್ರೀತಿ ಅಮರ, ಚಿರಕಾಲ ನಿಮ್ಮ ನೆನಪಿನಲ್ಲಿ ಉಳಿಬೇಕು ಅಂತ ಅನ್ನಿಸಿದರೆ, ಎರಡು ಮರಗಳನ್ನ ನಡಿ. ಒಂದು ನೀನು ಇನ್ನೊಂದು ಅವಳು ಅಂದೊಕೊಂಡು ಪ್ರೀತಿಯಿಂದ ಆ ಮರಗಳನ್ನ ಬೆಳೆಸಿ. ಇದರಿಂದ ಪರಿಸರ ಉಳಿಯುತ್ತೆ, ಸಮಾಜಕ್ಕೆ ಒಂದು ಒಳ್ಳೆ ಕೆಲಸ ಮಾಡಿದಂತಾಗುತ್ತೆ.
ಬನ್ನಿ ಪರಿಸರ ಉಳಿಸೋಣ, ಸಮಾಜಕ್ಕೆ ಒಳ್ಳೇದು ಮಾಡೋಣ.
--ರಾಜಶೇಕರಗೌಡ ಹೋತುರು, ಬಾಗಲವಾಡ.
rjgouda@gmail.com