
ಕಳೆದು ಹೋದವಳ ಕಾಡಿಸುವ ಪ್ರೀತಿ
ಆತನೋ ಕನಸುಗಳ ಬೆನ್ನೆರುವ ಹುಂಬ, ನನಸುಗಳ ಮೇಲೆ ಸವಾರಿ ಮಾಡುವ ಕದಂಬ, ಹೆಸರು ದತ್ತು. ಆಕೆಯೋ ಮಾತಿನ ಮಳ್ಳಿ, ನೋಟದಲ್ಲೇ ಹೃದಯ ಕದಿಯೋ ಕಳ್ಳಿ, ಜೀವಂತ ಶಿಲಾ ಬಾಲಿಕೆಗೆ ಇನ್ನೊಂದು ಹೆಸರೇ ಗೌರಿ.
ಅವಲ್ಲೆವೂ ಅವರ ಜೀವನ ಅತ್ಯಮೂಲ್ಯ ಸಂತಸದ ಕ್ಷಣಗಳು, ಅದರಲ್ಲಿ ಏನೋ ಒಂದು ತಾರಾ ಸುಖ ಕಂಡಿದ್ದವು ಆ ಎರಡು ಪ್ರೀತಿಯ ಹೃದಯಗಳು. ಮುಂಗಾರಿನ ತುಂತುರು ಹನಿ ಸುಟ್ಟು ಕರಲಾಗಿದ್ದ ಮಣ್ಣಿಗೆ ಜೀವ ನೀಡಿ ಮುಗ್ಗು ವಾಸನೆ ತರುವ ಇಳಿ ಸಂಜೆ ಸಮಯ. ತಲೆ ಹೋಗೋ ಕೆಲಸ ಇದ್ದರೂ ಎಲ್ಲಿತ್ತೋ ಅಲ್ಲಿಗೆ ಬಿಟ್ಟು ಚಿರತೆಯಂತೆ ಓಡಿ ಬರುತ್ತಿದ್ದ ಅವನು, rank ಹೇಗೆ ಬರೋದು ಅಂತ ಹೇಳಿಕೊಡೋ ಕ್ಲಾಸ್ ನಡಿತಿದ್ದರೂ ಅದನ್ನೇ ತಪ್ಪಿಸಿ ಜಿಂಕೆಯಂತೆ ಎಗರಿ ಎಗರಿ ಬರುತ್ತಿದ್ದ ಅವಳು. ಅವರಿಬ್ಬರ ಸಂಗಮವನ್ನೇ ಕಾಯುತಿದ್ದ ಜಿನಿ ಜಿನಿ ಹನಿಯಿಂದ ಸುರುವಾಗಿ ದೋ ಎಂದು ಸುರಿವುಯ ಆ ಮಳೆ. ಅವನ ಬಾಹುವನ್ನು ಗೌರಿ ತನ್ನೆದೆಗೆ ಗಟ್ಟಿಯಾಗಿ ತಬ್ಬಿಕೊಂಡು ಮಳೆಯನಿಯಲ್ಲಿ ನೆನೆಯುತ್ತ ಹೆಜ್ಜೆಯ ಜೊತೆ ಹೆಜ್ಜೆ ಹಾಕ್ತ ಇದ್ರೆ ಇಡೀ ರಸ್ತೆಯ ಜನ ಅವರನ್ನು ಇವರೇನು ಹುಚ್ಚರೋ ಎಂದು ಒಂದು ಕ್ಷಣ ಬೆಕ್ಕಸ ಬೆರಗಾಗಿ ನೋಡ್ತಾ ಇರ್ತಿದ್ದರು. ಹಾಲು ಕೆನೆಯಷ್ಟು ಮೃದುವಾದ ಅವಳ ಹಣೆಯಿಂದ ಜಾರಿ ಸಂಪಿಗೆಯ ಆ ಮೂಗನ್ನು ಬಳಸಿ, ಬಿಲ್ಲಿನಾಕಾರದ ಕೆಂಪು ತುಟಿಗಳಿಗೆ ಮುತ್ತಿಟ್ಟು ಉಬ್ಬಿದ ಗಲ್ಲದಿಂದ ಬಿಳುತಿದ್ದ ಪ್ರತಿ ಹನಿಯನ್ನು ಬೊಗಸೆಯಲ್ಲಿಡಿದು ಅಮ್ರುಥದಂತೆ ಕುಡಿತಾ ಇದ್ದ ದತ್ತು. ಚಂದ್ರಪ್ಪನ ಇಸ್ ಕ್ರೀಮ್ ಅಂಗಡಿಯಲ್ಲಿ ಕೋನ್ ಇಸ್ ತಗೊಂಡು ಮೆಚ್ಚಿನ ಗಾಂದಿ ಗಾರ್ಡನ್ ನ ಮೂಲೆಯ ಆಲದ ಮರದ ಕೆಳಗೆ ತೊಯ್ದ ಕಲ್ಲು ಬೆಂಚಿನ ಮೇಲೆ ಕುಲಿತುಕೊಳ್ಳುತ್ತಿದ್ದಳು ಅವಳು, ಅವಳ ಮಡಿಲಲ್ಲಿ ಮಗುವಂತೆ ಮಲಗಿ ಒಮ್ಮೆ ಎಲೆಯಿಂದ ಬೀಳುತಿದ್ದ ಹನಿಗೆ ಇನ್ನೊಮ್ಮೆ ಅವಳ ಕೋನ್ ಐಸ್ ಕ್ರೀಮ್ ಗೆ ಬಾಯಿವೊಡ್ದುತಿದ್ದ ಅವನು. ಅವಳೆಷ್ಟೇ ಸಿಮಿಡಿಗೊಂಡು ಸಿಟ್ತಾಗ್ತಾ ಇದ್ದರೂ ಅವಳ ಐಸ್ ಕಿತ್ತಿಕೊಂಡು ತಿನ್ನ್ನೋದರಲ್ಲಿ ಇರೋ ಮಜಾ ಮತ್ತೆಲ್ಲಿ ಕಾಣಲು ಸದ್ಯವೇ ಇರಲ್ಲಿಲ್ಲ ಅವನಿಗೆ. ಮಳೆ ನಿಂತು ಬೀಸುತಿದ್ದ ತಣ್ಣನೆಯ ಗಾಳಿಗೆ ಸಣ್ಣಗೆ ಚಳಿಯಾಗಿ ಅವಳನ್ನೊಮ್ಮೆ ಗಟ್ಟಿಯಾಗಿ ತಬ್ಬ್ಬಿಕೊಂಡು ಮಲಗಿದರೆ ಸಮಯ ಹೋಗಿ ರಾತ್ರಿಯಗೊದೆ ಗೊತ್ತಾಗ್ತಾ ಇರಲಿಲ್ಲ. ಒಂಬತ್ತು ಗಂಟೆಯಲ್ಲಿ ನಿಶಾಚರಿಗಳಂತೆ ಸಿಕ್ಕ ಸಿಕ್ಕ ಓಣಿ ರಸ್ತೆಗಳಲ್ಲಿ ಸುತ್ತಿ, ಸಾಕಾಗಿ ಕೊನೆಗೆ ಅವಳನ್ನು ಅವಳ ಮನೆಗೆ ಮುಟ್ಟಿಸಿ ಇನ್ನೇನು ತನ್ನ ದಾರಿ ಹಿಡಿಯಬೇಕು ಅನೋಷ್ಟರಲ್ಲಿ ಗೌರಿ ತನ್ನ ನಾಲಿಗೆಯ ಚೂಪನ್ನು ಮುಂದೆ ಮಾಡಿ ಮೂಗು ಮುರಿದು ಅಣಕಿಸಿ ಟಾಟಾ ಹೇಳಿ ಮನೆಯೊಳಕ್ಕೆ ಓಡಿದಾಗ ಅವನ ಎದೆಗೆ ಒಮ್ಮೆ ಆಕೆಯ ತುಟಿಗಳಿಂದ ಮುತ್ತಿಕ್ಕಿದಂತ ಜುಮ್ಮೆನ್ನುವ ಅನುಭವ ಹೇಗೆ ಮರಿಯೋಕೆ ಸಾದ್ಯ.
ಬೆಳಿಗ್ಗೆ ಗೋಡೆಯ ಮೇಲಿನ ಗಡಿಯಾರ ಆರು ಮುಟ್ಟೋದಕ್ಕೂ ಮೊದಲೇ ಅವಳ ಕಾಲ್ ಅವನ ಮೊಬೈಲ್ಗೆ. ಅರೆ ತೆರೆದ ನಿದ್ದೆಗಣ್ಣಲ್ಲೇ ಸೆಲ್ ಎತ್ತಿ ಕಿವಿಗಿಟ್ಟುಕೊಂಡರೆ ಕೆಲಿಸುತಿದ್ದುದು ಅವಳ ಮಧುರ ಕಂಠ ಅಲ್ಲ ಬರೀ ಸೀನುಗಳ ಮೇಲೆ ಸೀನು. ಶೀತ ಆಗಿ ಅವಳ ಮೂಗು ಕಟ್ಟಿ, ಪ್ರತಿ ಬಾರಿ ಮೂಗೆರಿಸುತಾ ಗುಡ್ ಮಾರ್ನಿಂಗ್ ಹೇಳ್ತಾ ಇದ್ದರೆ ದತ್ತುಗೆ ಒಳಗೊಳಗೇ ನಗು ಬರ್ತಾ ಇತ್ತು.
ದೇವರು ಎಷ್ಟು ಒಳ್ಳೆಯವೊನೋ ಅಷ್ಟೇ ಕ್ರೂರಿಯೂ ಹೌದು. ಅವನಿಗೆ ಒಂದು ಭಯ, ಎಲ್ಲರೂ ಸುಖವಾಗಿದ್ದರೆ ತನ್ನನ್ನೆಲ್ಲಿ ಮರೆತು ಬಿಡ್ತಾರೋ ಅನ್ನೋ ಸಂಕಟ,ಅದಕ್ಕೆ ಯಾರನ್ನು ಸಂತೋಷವಾಗಿ ಜೀವಿಸಲು ಬಿಡೋದೇ ಇಲ್ಲ. ಅದೊಂದು ಮಟ ಮಟ ಮಧ್ಯಾನ್ಹ ಕಾಲೇಜ್ ಮುಗಿಸಿ ತನ್ನ ಮುದ್ದಾದ ಪೆಪ್ಟಿ ಬೈಕಲ್ಲಿ ಗಾಳಿಯಲ್ಲಿ ತೇಲುತ್ತ ಹೋಗುತಿದ್ದಳು ಗೌರಿ.ಬಿಳಿಯ ಚೋದಿದಾರದಲ್ಲಿ ಮುತ್ತಿನಂತೆ ಕಂಗೊಳಿಸುತಿದ್ದ ಸುಂದರಿ, ಕುತ್ತಿಗೆಗೆ ಸುತ್ತಿದ್ದ ತುಪ್ಪಟ ಹಾಗೆ ಹರಡ್ತಾ ಇತ್ತು. ವಿಧಿ ಲಿಕಿತ ಯಾರು ತಾನೆ ಬಲ್ಲರು. ಹಿಂದಿನಿಂದ ಬಂದ ಟ್ರುಕ್ ನ ಕೊಂಡಿಗೆ ದುಪ್ಪಟ್ಟ ಸಿಕ್ಕಿ ಎಳೆದೆ ಬಿಡ್ತು. ಏನಾಗುತಿದೆ ಅನ್ನೋಷ್ಟರಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದು ರಕ್ತದ ಮಡುವಿನಲ್ಲಿ ಹೆಣವಾಗಿ. ಕನಸಲ್ಲೂ ಎಣಿಸಿರಲಿಲ್ಲ ಅವನು, ಆ ಸೀನು, ಅಣುಕು, ಆ ಐಸ್ ಕ್ರೀಮ್ ಕೊನೆಗೆ ಅವಳೇ ದೂರ ಬಹು ದೂರ ಹೋಗ್ತಾಳೆ ಅಂತ. ಆಗೆಲ್ಲ ಮುಂಜಾನೆಯ ಸಿಹಿ ನಿದ್ದೆಯಲ್ಲಿದ್ದಾಗ ಕಾಲ್ ಮಾಡಿ ನಿದ್ದೆಗೆಡಿಸಬೇಡ ಅಂತ ಅವಳನ್ನ ಬೇಡುತಿದ್ದ. ಇವತ್ತು ನಿದ್ದೆಗೆಡಿಸಲು ಅವಳಿಲ್ಲ ಆದರೆ ಏನು ಮಾಡಿದರೂ ಅವಳ ನೆನಪುಗಳು ಮಾಯವಾಗದೆ ಎಸ್ಟೋ ರಾತ್ರಿಗಳು ನಿದ್ದೇನೆ ಇಲ್ಲದೆ ಕಳೆದು ಹೋಗ್ತಾ ಇವೆ. ಯಾರು ಏನೇ ಅದರೂ ಟೈಮ್ ತನ್ನ ನಿಯತ್ತನ್ನು ಮರೆಯೋಲ್ಲ, ಕಾಲಚಕ್ರ ನಿಲ್ಲೋಲ್ಲ. ಮತ್ತೆ ಮುಂಗಾರು ಶುರು ಆಗೋ ಸಮಯ, ಅವಳಿಲ್ಲದೆ ಐಸ್ ಸಪ್ಪೆಯಾಗಿದೆ, ಆಲದ ಮರ ಒಣಗಿ ಹೋಗಿದೆ, ದತ್ತುವಿನ ಜೀವನವೇ ಸತ್ತು ಹೋಗಿದೆ. ಸುರಿಯೋ ಮಳೆಗೆ ಮುಖ ಮಾಡಿ ಒಬ್ಬನೇ ನಿಂತು ಅವಳ ಬರುವಿಕೆಗೆ ಕಾಯ್ತಾ ಇದ್ದಾನೆ ಅವನು. ಮತ್ತೆಂದು ದತ್ತುವನ್ನು ತಿರುಗಿ ನೋಡದಂತ ಮಾಯಾ ಪ್ರಮಂಚದಲ್ಲಿ ಮಾಯವಾಗಿ ಮರೆಯಾದವಳು ಇನ್ನೆಂದು ವಾಪಸು ಬರೋದಿಲ್ಲ ಅಂತ ಗೊತ್ತು ಅವನಿಗೆ, ಆದರೂ ಕಾಯ್ತಾ ಇದ್ದಾನೆ ಯಾಕಂದ್ರೆ, ಕಾಡೋ ಆ ನೆನಪುಗಳ ಕಾಲು ಕಟ್ಟಿ ಹಾಕಲು ಇರೋ ದಾರಿ ಅಂದ್ರೆ ಕಾಯೋದು, ಕಾಯುತ ಕಾಯುತ ತನ್ನನ್ನು ತಾನು ಮರೆಯೋದು, ಅದೇ ಅಲ್ವೇ ಪ್ರೀತಿ.
--ರಾಜಶೇಕರಗೌಡ ಹೋತುರು.
rjgouda@gmail.com
ಬಾಗಲವಾಡ
ರಾಯಚೂರು
7760961477