Saturday, August 28, 2010

ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ಲೇಖನ : ರಾಕೆಟ್ ಮತ್ತೆ ಮೇಲೇರುತ್ತದೆ, ಆದರೆ ನಮ್ಮ ಸ್ವಾಭಿಮಾನ ಏಳುವುದು ಯಾವಾಗ?

ಗೆಳೆಯರೇ
ಕೆಳಗೆ ಪ್ರಕಟಿಸಿದ ಈ ಲೇಖನ ವಿಜಯ ಕರ್ನಾಟಕದಲ್ಲಿ ಏಪ್ರಿಲ್ ೨೦ ರಂದು ಪ್ರಕಟವಾಗಿದ್ದು ಅದನ್ನು ಇಲ್ಲಿ ನಿಮಗಾಗಿ ನೀಡಿದ್ದೇನೆ.


ಗೆಳೆಯರೇ
ಕೆಳಗೆ ಪ್ರಕಟಿಸಿದ ಈ ಲೇಖನ ವಿಜಯ ಕರ್ನಾಟಕದಲ್ಲಿ ಏಪ್ರಿಲ್ ೨೦ ರಂದು ಪ್ರಕಟವಾಗಿದ್ದು ಅದನ್ನು ಇಲ್ಲಿ ನಿಮಗಾಗಿ ನೀಡಿದ್ದೇನೆ.

'ತಾನೊಂದು ಬಗೆದರೆ ದೈವವೊಂದು ಬಗೆದಂತೆ' ಇದು ನಮ್ಮ ಇಸ್ರೋದ ಇವತ್ತಿನ ಗತಿ. 1992 ರಲ್ಲಿ ರಷ್ಯ ದೇಶದಿಂದ ಭಾರತಕ್ಕೆ ಬರಬೇಕಿದ್ದ cryogenic ಟೆಕ್ನಾಲಜಿಯನ್ನು ವಿಶ್ವದ ದೊಡ್ಡಣ್ಣ ಅಮೆರಿಕದ ಸಣ್ಣ ಬುದ್ದಿ, ಕ್ಷಮಿಸಿ ಚಿಲ್ಲರೆ ಬುದ್ಧಿಯಿಂದಾಗಿ ತಪ್ಪಿ ಹೋಗಿತ್ತು. ಆದರೆ ಭಾರತದ ವಿಜ್ಞಾನಿಗಳೇನು ಸಮಾನ್ನೆರೆ? ಅದನ್ನೇ ಒಂದು ಸವಲನ್ನಾಗಿ ಸ್ವೀಕರಿಸಿ ಅವತ್ತು ರಷ್ಯದಿಂದ ಬರಬೇಕಿದ್ದ ಅದೇ ತಂತ್ರಜ್ಞಾನವನ್ನ 15 ವರ್ಷಗಳ ಪರಿಶ್ರಮ, ಬೆವನಿರಿಂದ ನಮ್ಮ ನೆಲದಲ್ಲೇ ತಮ್ಮ ಬುದ್ದಿವಂತಿಕೆಯಿಂದ ತಯಾರಿಸಿ ನಮ್ಮ ಬಗ್ಗೆ ಹಗುರವಾಗಿ ಮಾತಾಡುವವರಿಗೆ ಸರಿಯಾದ ಪಾಠ ಕಲಿಸಿ ನಮ್ಮ ಶಕ್ತಿ ಏನು ಅನ್ನೋದನ್ನ ಜಗತ್ತಿಗೆ ತೋರಿಸಿದ್ದಾರೆ ನಮ್ಮ ಇಸ್ರೋ ವಿಜ್ಞಾನಿಗಳು. ಆದರೆ ಇಷ್ಟೆಲ್ಲಾ ಕಸರಿತ್ತಿನ ಮದ್ದೆ ಮೊನ್ನೆ ನಡೆದ GSLV -D3 ರಾಕೆಟ್ ಉಡಾವಣೆ ವಿಫಲವಾಗಿದ್ದು ಸ್ವಲ್ಪ ಕೆದಕರವೆನಿಸುತ್ತಿದೆ. ಆದರೋ ಇಸ್ರೋದ ಸಾಧನೆ, ಸಾಮರ್ಥದ ಬಗ್ಗೆ ಎರಡು ಮಾತಿಲ್ಲ. ದೇಶದ ಅರ್ಥ ವ್ಯವಸ್ತೆ, ಆರೋಗ್ಯ ವ್ಯವಸ್ತೆ, ದೂರ ಸಂಪರ್ಕ ಕ್ಷೇತ್ರದಲ್ಲಿ ಗಮನಾರ್ಹ ಅಭಿವೃದ್ಧಿ ಕಾಣಲು ಕಾರಣಿಕರ್ತ ಈ ಇಸ್ರೋ, ಈ mission ಸಫಲವಾಗಿದ್ದರೆ cryogenic ಟೆಕ್ನಾಲಜಿಯನ್ನು ಹೊಂದಿದ ಪ್ರಪಂಚದ ಐದು ರಾಷ್ಟ್ರಗಳಾದ ಅಮೇರಿಕ, ರಷ್ಯ, ಜಪಾನ್, ಫ್ರೆಂಚ್ ಮತ್ತು ಚೀನಾದಂತ ದೇಶಗಳ ಸಾಲಿಗೆ ನಮ್ಮ ದೇವಶವೂ ಸೇರುತ್ತಿತು ಅಷ್ಟೇ ಅಲ್ಲ ಇವತ್ತಿನ TV, ಮೊಬೈಲ್ ಇಂಟರ್ನೆಟ್ ಬಳಕೆಯ ದಿಕ್ಕೇ ಬದಲಾಗುತ್ತಿತು. ISRO ಹೇಳಿಕೊಂಡಂತೆ GSLV -D3 ಉದ್ದೇಶ ಅಧುನಿಕ ತಂತ್ರಜ್ಞಾನವನ್ನ್ನು ಭಾರತದ ಪ್ರತಿ ಹಳ್ಳಿಯ ಪ್ರತಿ ಮನೆಗೆ ಒಯ್ಯಿಯೋದೆ ಆಗಿತ್ತು. GSLV -D3 ಯಿಂದಾಗಿ ದೇಶದ ಯಾವುದೇ ಮೂಲೆಯಿಂದ ಇಂಟರ್ನೆಟ್ ಬಳಕೆ ಮಾಡಬಹುದಿತ್ತು, ಜನರ ಜೀವನ ಹಾಸು ಹೊಕ್ಕಾಗಿರುವ ಮೊಬೈಲ್ ಮೂಲಕ ಎಲ್ಲೋ ನಡೆದ ಕ್ರಿಕೆಟನ್ನು ಲೈವ್ ಆಗಿ ಹಾಗು ಸ್ಪಷ್ಟ ಚಿತ್ರ ಮತ್ತು ದ್ವನಿಯಲ್ಲಿ ನೋಡಬಹುದಿತ್ತು. ಇಂತ ಮಹಾ ಯೋಜನೆಯ ಕನಸು ಇಸ್ರೋಗೆ ಕನಸು ನನಸಾಗದೆ ಇರೋದಕ್ಕೆ ತುಂಬಾ ನಿರಾಸೆಯಾಗಿದೆ.



ಆದರೆ ಇದಕ್ಕಿಂತ ಭ್ರಮ ನಿರಶನ ಆಗೋದು ನಮ್ಮ ಜನರ, ರಾಜಕಾರಣಿಗಳ, ಮಾದ್ಯಮದ ವರ್ತನೆ ಮತ್ತು ತಿಳುವಳಿಕೆಯನ್ನು ನೋಡಿದಾಗ. ಎಷ್ಟು ಜನಕ್ಕೆ ಏಪ್ರಿಲ್ 15 ರ ಸಾಯಂಕಾಲ GSLV -D3 ರಾಕೆಟ್ ಉಡಾವಣೆ ಇದೆ ಅನ್ನೋದು ಗೊತ್ತಿತ್ತು? ಉಡಾವಣೆ ವಿಫಲ ಅದ ನಂತರ ನನ್ನ ಮಿತ್ರರಿಗೆ ಅದರ ಬಗ್ಗೆ ಹೇಳಿದೆ. ಅವರ ಪ್ರತಿಕ್ರಿಯೆ ಕೇಳಿ ರೋಶಿ ಹೋದೆ. ಒಬ್ಬ ಹೇಳಿದ 'ಭಾರತದ ವಿಜ್ಞಾನಿಗಳ ಹಣೆ ಬರಹನೆ ಇಷ್ಟು, ಏನು ಸಾದಿಸೊಲ್ಲ, ನಮ್ಮವರು ತಯಾರು ಮಾಡಿದ್ದಕ್ಕೆ ರಾಕೆಟ್ ವಿಫಲ ಆಯಿತು, ಅದೇ ಅಮೇರಿಕ ಇಲ್ಲ ಜಪಾನ್ ನವರು ತಯಾರಿಸಿದ್ದರೆ ಕಂಡಿತ success ಅಗ್ತಾ ಇತ್ತು' . ಇದು ಬರೀ ನನ್ನ ಮಿತ್ರನ ಮಾತಲ್ಲ ಬಹುತೇಕರು ಇದೆ ರೀತಿ ಮಾತಾಡ್ತಾ ಇದ್ದಾರೆ. ಒಂದು ಕ್ಷಣ ನಮ್ಮ ಬಗ್ಗೆ ನಮಗೆ ಗೌರವ ಇಲ್ಲದೆ ನಾಯಿಗಿಂತ ಕೀಳಾಗಿ ಜೀವನ ಮಾಡುತ್ತಿರು ಮನುಷ್ಯರು ನಾವು ಅನ್ನಿಸಿತು. ಒಂದು ಅರ್ಥ ಮಾಡಿಕೊಳ್ಳಬೇಕು ಇವತ್ತು ನಾವು ಮಾಹಿತಿ ತಂತ್ರಜ್ಞಾದಲ್ಲಿ ಮುಂದುವರೆದು ಸಾವಿರಾರು ಕಂಪನಿಗಳು ಹುಟ್ಟಿ. ನನ್ನಂತ ಲಕ್ಷಾಂತರ ಮದ್ಯಮ ವರ್ಗದ ಹುಡುಗರು ಸಾಫ್ಟ್ವೇರ್ ಇಂಜಿನಿಯರ್ ಆಗಿ ತಮ್ಮ ತಮ್ಮ ಅಪ್ಪ ಅಮ್ಮನ್ನ ನೆಮ್ಮದಿಯಿಂದ ನೋಡಿಕೊಳ್ತಾ ಇದ್ದೇವೆ ಅಷ್ಟೇ ಅಲ್ಲ ಹೊರ ದೇಶಕ್ಕೆ ಹೋಗಿ ಬರಬೇಕು ಅಂತ ಕನಸು ಕಾಣತಿದ್ದೇವೆ ಅಂದರೆ ಅದಕ್ಕೆಲ್ಲ ಮುಖ್ಯ ಕಾರಣ ಅಮೆರಿಕದಿಂದ ಇಲ್ಲವೇ ಇಂಗ್ಲೆಂಡಿನಿಂದ ಬರುವ ಡಾಲರ್ ದುಡ್ಡಲ್ಲ, ನಮ್ಮ ಇಸ್ರೋದ ಶ್ರಮ.

ಇನ್ನು ಮಾದ್ಯಮದ ಬಗ್ಗೆ ಹೇಳಬೇಕೆಂದರೆ ಹೇಳಲು ಮಾತೆ ಬರೋಲ್ಲ. ರಸಿಕ ನಿತ್ಯಾನಂದ ಸ್ವಾಮಿಯ ರಾಸಲೀಲೆಯನ್ನು ಮತ್ತೆ ಮತ್ತೆ ಗಂಟೆ ಗಟ್ಟಲೆ ಪ್ರಸಾರ ಮಾಡುತ್ತವೆ, ನಾಲ್ಕು ಐದು ಮಂದಿಯನ್ನು ಕೂಡಿಸಿಕೊಂಡು ದಿನಗಟ್ಲೆ ಚರ್ಚೆ ನಡೆಸುತ್ತವೆ, IPL ಮ್ಯಾಚ್ ಗಳ ನೇರ ಪ್ರಸಾರ ಮಾಡುತ್ತವೆ, ಹುಡುಗಾಟ ಹಾಡುವ ಲಲಿತ್ ಮೋದಿಯ ಮತ್ತು 50 ವಸಂತಗಳನ್ನ ಕಳೆದರೂ maturity ಇಲ್ಲದಂತೆ ಮಾತಾಡೋ ಶಶಿ ತರೂರ್ ಮೋಜಿನ ಆಟಕ್ಕೆ ಬಣ್ಣ ಬಳಿದು ರಂಗು ರಂಗಾಗಿ Telecast ಮಾಡುತ್ತವೆ. ರಾಕಿ ಸಾವಂತ, ರಾಹುಲ್ ಮಹಾಜನ್, ಪಕಾ ಪಕಾ ಅಂತ ನಗುವ ನವಜೋತ್ ಸಿಂಗ್ ಸಿದ್ಧುವಿನ ಕಾರ್ಯಕ್ರಮಕ್ಕೆ ಅದ್ದೂರಿ ಸೆಟ್ ಹಾಕಿ ಬೇರೆ ಬೇರೆ ಆಯಾಮಗಳಲ್ಲಿ ಶೂಟ್ ಮಾಡಿ ತೋರಿಸುತ್ತಾರೆ ಆದರೆ ರಾಕೆಟ್ ಉಡಾವಣೆ ಬಗ್ಗೆ ಐದು ನಿಮಿಷಕ್ಕಿಂತ ಹೆಚ್ಚಿನ ಸುದ್ಧಿ ಬಿತ್ತರ ಮಾಡೋದಿಲ್ಲ. ಬೆರಳೆಣಿಕೆಯ ಪತ್ರಿಕೆಗಳನ್ನ ಬಿಟ್ಟರೆ ಯಾವೊಂದು ಪತ್ರಿಕೆ ಒಂದು ಪುಟ ಬಿಡಿ ಅರ್ಧ ಪುಟದಷ್ಟು GSLV -D3 ರಾಕೆಟ್ ಉಡಾವಣೆಯ ಮಾಹಿತಿಯನ್ನು ಪ್ರಕಟಿಸಿವೆ ಹೇಳಿ?

ನಮ್ಮ ರಾಜಕಾರಣಿಗಳೋ, ಅವರಿಗೆ ತಮ್ಮ ಕುರ್ಚಿಯನ್ನು ಹೇಗೆ ಉಳಿಸಿಕೊಳ್ಳಬೇಕು, ಎಲ್ಲೆಲ್ಲಿ ಹೇಗೆ ಎಲೆಕ್ಷನ್ ಮಾಡಬೇಕು, ಯಾವ ಕಳ್ಳನಿಗೆ ಸುಳ್ಳನಿಗೆ ಟಿಕೆಟ್ ಕೊಡಬೇಕು, ಎಷ್ಟು ಹಣವನ್ನು ಸುರೀಬೇಕು ಹೇಗೆ ಅದಕ್ಕಿಂತ ಎರಡರಷ್ಟು ದುಡ್ಡು ಹೇಗೆ ಮಾಡಬೇಕು, ಎದುರಿಗಿನ ಪಕ್ಷದ ಮೇಲೆ ಹೇಗೆ ಕೆಸರು ಎರಚಬೇಕು ಅಂತ ಯೋಚನೆ ಮಾಡೋದಕ್ಕೆ ಟೈಮ್ ಇಲ್ಲ ಇನ್ನು ದೇಶದ, ಇಸ್ರೋದ ಬಗ್ಗೆ ಆಲೋಚನೆ ಮಾಡಲು ಅಗುತ್ತಾ? ಇವತ್ತು ಎಷ್ಟೋ ನಮ್ಮ ರಾಜಕಾರಣಿಗಳಿಗೆ ಇಸ್ರೋದ long form ಬಿಡಿ ಅದು ನಮ್ಮ ದೇಶದಲ್ಲಿ ಇದೆಯಾ, ಅದು ಏನು ಮಾಡ್ತಾ ಇದೆ ಅನ್ನೋದೇ ಗೊತ್ತಿಲ್ಲ.

ಇನ್ನು ನಮ್ಮ ಯುವಕರು, ವಿದ್ಯಾವಂತ ಯುವಕರು ಕೆಲಸ, ಪ್ರೀತಿ, ಪ್ರೇಮ, ಪುಬ್, ಮ್ಯಾಚ್ ಅಂತ ಅದರಲ್ಲೇ ಬ್ಯುಸಿ, ಹಳ್ಳಿಯ ಜನ ಚೈನಾದ ಮೊಬೈಲ್ನಲ್ಲಿ ಜನಪದ ಗೀತೇನೋ, ಬಜನೇ ಪದನೋ ಹಾಕಿಕೊಂಡು ಕೇಳೋದರಲ್ಲಿ ಬ್ಯುಸಿ, ನಮ್ಮ ಯುತಿಯರು ಗೊಳೋ ಅಂತ ಕಣ್ಣೀರು ಹಾಕುವ ವರ್ಷಾನು ವರ್ಷ ಬರುವ ಕಿರಿ ಕಿರಿ ಮೇಗ ಧಾರಾವಾಹಿನ ಕಷ್ಟ ಆದರೂ ಇಷ್ಟ ಪಟ್ಟು ನೋಡ್ತಾರೆ ಹೊರತು ಇಸ್ರೋದ ರಾಕೆಟ್ launch ನೋಡಿ ಟೈಮ್ ವೇಸ್ಟ್ ಮಾಡೋಲ್ಲ.

ಯಾರು ತಮ್ಮತ್ತ ಗಮನ ಹರಿಸಿದರು ಬಿಟ್ಟರೂ, ಅವರ ಬಗ್ಗೆ ಜನ ತಿಳಿದುಕೊಂಡು ವಿಜ್ಞಾನಿಗಳನ್ನು ನಿಜ ಜೀವನದ ಹೀರೋಗಳು ಅಂತ ಅಂದುಕೊಂಡರೂ ಬಿಟ್ಟರೂ ತಮ್ಮ ಕೆಲಸನ ತಾವು ಮಾಡೇ ಮಾಡ್ತಾರೆ, ದೇಶದ ಭವಿಷ್ಯವನ್ನು ಉತ್ತಮ ರೀತಿಯಲ್ಲೇ ರೂಪಿಸುತ್ತಾರೆ. ಆದರೆ ಒಂದು ವಿಷಯ ಅಂದ್ರೆ ಜನಗಗಳಲ್ಲಿ ಇಸ್ರೋ ಮತ್ತು ಅದರ ಬಗ್ಗೆ ತಿಳುವಳಿಕೆ ಬಂದು, ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಪ್ರಾಮುಕ್ಯತೆ ಪಡೆದರೆ ಅದು ನಮ್ಮ ಎಮ್ಮೆ ತೊಗಲಿನ ರಾಜಕಾರಿಣಿಗಳಿಗೆ ತಟ್ಟಿ ಇಸ್ರೋಗೆ ಹೆಚ್ಚು ಹೆಚ್ಚು ಪ್ರಯೋಗ ಮಾಡಲು ಅವಕಾಶ ಕೊಡ್ತಾರೆ, ಆ ಮೂಲಕ ವಿಫಲ ಆದರೂ ಸಫಲ ಆದರೂ ನಮ್ಮ ಇಡೀ ದೇಶದ ಜನ ನಮ್ಮ ಜೊತೆ ಇದ್ದಾರೆ ಏನೂ ಆತ್ಮ ಶ್ತೈರ್ಯ ಇಸ್ರೋಗೆ ಇರುತ್ತೆ, ಮತ್ತೆ ಮುನ್ನುಗ್ಗುತ್ತೆ.

ಫೈನಲ್ ಮ್ಯಾಚ್ ನಲ್ಲಿ ಭಾರತ ಗೆದ್ದು ಬರಿಲಿ ಅಂತ ಪೂಜೆ ಹೋಮಗಳನ್ನು ಮಾಡೋ ರೀತಿ ನಮ್ಮ ಜನ ರಾಕೆಟ್ ಉಡಾವಣೆ ಸಮಯದಲ್ಲಿ ಪೂಜೆ ಹೋಮಗಳನ್ನ ಮಾಡಬೇಕು, ಉಡಾವಣೆ ಯಸಸ್ವಿ ಆದರೆ ತಮ್ಮ ಮನೆಯ ಹಬ್ಬದಂತೆ ಹೋಳಿಗೆ ಮಾಡಿಕೊಂಡು ಹುಂಡು ಸಂಬ್ರಮಿಸಬೇಕು, ವಿಫಲ ಆದ್ರೆ ದೂರದ ಯಾವುದೋ ಸಂಬಂದಿ ತೀರಿ ಹೋದ ದುಖ: ಮನಸಲ್ಲಿ ಮನೆಯಲ್ಲಿ ಮಡುಗಟ್ಟಬೇಕು, ಹಾಗೆ ಎಷ್ಟೇ ವಿಫಲವಾದ್ರೂ ಇಸ್ರೋನಲ್ಲಿ ನಂಬಿಕೆ ಇಟ್ಟು ಸಕ್ಸಸ್ ಗಾಗಿ ಹರಿಸಬೇಕು, ಹರಿಸಬೇಕು ಆಗ ನಮ್ಮ ಭಾರತ ದೇಶದಲ್ಲಿ ಇಸ್ರೋದಂತ ನೂರಾರು ಸಂಸ್ತೆಗಳು ಹುಟ್ಟುತ್ತವೆ, ದೇಶದ ಉದ್ಧಾರಕ್ಕಾಗಿ ದುಡಿಯುತ್ತವೆ. ಅಂತ ಕಾಲ ಯಾವತ್ತು ಬರುತ್ತೋ ಕಾದು ನೋಡಬೇಕು.

-ರಾಜಶೇಕರಗೌಡ ಹೋತುರ್, ಬಾಗಲವಾಡ
ರಾಯಚೂರು
rjgouda@gmail.com
9900216597

ನಮ್ಮ ಜೀವಂತ ಶವಗಳ ಮೇಲೆ ನಿಮ್ಮ ಕೈಗಾರಿಕೆಯ ಸಮಾದಿ ಕಟ್ಟದಿರಿ.

ಅದೊಂದು ಪುಟ್ಟ ಸಂಸಾರ ಗಂಡ, ಹೆಂಡತಿ ಮತ್ತು ಮಗು. ಇರುವ ಎರಡು ಎಕರೆ ಭೂಮಿಯಲ್ಲಿ ಹಗಲು ಸುಡು ಬಿಸಿಲಿನಲ್ಲಿ ದೇಹ ಕರಕಲಾಗಿಸಿ ದುಡಿದು ಅವತ್ತಿನ ಹಿಟ್ಟು ತರುವ ಗಂಡ, ತಂದ ಹಿಟ್ಟನ್ನೇ ಪ್ರೀತಿಯಿಂದ ಅಡುಗೆ ಮಾಡಿ ತನ್ನ ಒಡಲು ಪೂರ್ತಿ ತುಂಬದಿದ್ದರೂ ಮಗನ ಹೊಟ್ಟೆಗೆ ಹಾಕಿ ಅವನ ಭವಿಷ್ಯದ ಬಗ್ಗೆ ಕನಸು ಕಟ್ಟಿ, ಇಂದಲ್ಲ ನಾಳೆ ತನ್ನ ಮಗ ದೊಡ್ಡವನಾಗಿ ಚೆನ್ನಾಗಿ ಓದಿ ಈ ಧರಿದ್ರ ಜೀವನದಿಂದ ಮುಕ್ತಿ ದೊರೆಕಿಸುವಂತೆ ಮಾಡು ಎಂದು ಮೂರೊತ್ತು ದೇವರಿಗೆ ಕೈ ಮುಗಿವುವ ತಾಯಿ. ಇಷ್ಟ ಇಲ್ಲದಿದ್ದರೂ ವಿಧಿ ಇಲ್ಲದೆ ತೊಟ್ಟ ಒಂದು ಜೊತೆ ಬಟ್ಟೆಯಲ್ಲಿ ಶಾಲೆಗೇ ಹೋಗಿ, ಗೆಳೆಯರ ಜೊತೆ ದಿನವೂ ಮೂದಲಿಸಿಕೊಂಡು ಬರುವ ಮಗ. ಇಂತ ಸಂಧರ್ಭದಲ್ಲಿ ಯಾವುದೋ ಸರ್ಕಾರ ಇನ್ನಾವುದೋ ಪಾಲಿಸಿ ತಂದು, ಎಲ್ಲೋ ಇರುವವರನ್ನು ಉದ್ಧಾರ ಮಾಡಲು ಹೋಗಿ ಇರವ ಎರಡು ಎಕರೆ ಭೂಮಿಯನ್ನು ಈ ರೈತನಿಂದ ಕಿತ್ತಿಕೊಂಡು ಬಿಟ್ಟರೆ ಏನು ಗತಿ?. ಸರ್ಕಾರ ಕೊಡುವ ಪರಿಹಾರ ಧನ ಒಂದೆರಡು ವರ್ಷ ಸುಖವಾಗಿ ಇಡಲು ಸಾಕಾದೀತು, ಆದರೆ ಜೀವನ ಕಟ್ಟಿ ಕೊಟ್ಟಿದ್ದ ಭೂಮಿಯನ್ನು ಮರಳಿ ಪಡೆಯಲು ಸಾದ್ಯವೆ? ಜೀವನವೇ ಕಮರಿದ ಮೇಲೆ ಜೀವಿಸಲು ಸಾದ್ಯವೆ? ಪರಿಣಾಮ ಆ ರೈತ ಇದ್ದು ಸತ್ತಂತೆ ಜೀವಿಸುವದಕಿಂತ ಸಾಯುದೆ ಮೇಲೆಂದು ನಿರ್ಧರಿಸಿ, ಇನ್ನೂ ಜಗತ್ತನ್ನೇ ಸರಿಯಾದ ಅರಿಯದ ಮಗು ಬೇಡ ಬೇಡ ಅಂತ ಕೈ ಮುಗಿದು ಪರಿ ಪರಿ ಅಂಗಲಾಚುತಿದ್ದರೂ ಬೇರೆ ದಾರಿ ಕಾಣದೆ ಅವನು ತಿನ್ನುವ ಅನ್ನಕ್ಕೆ ವಿಷಯಿಟ್ಟು, ಜೀವ ಕೊಟ್ಟ ಮಗನಿಗೆ ಜೀವನ ಕೊಡದೆ ಕಣ್ಣ ಮುಂದೆ ಸಾಯಿಸಿದ ನೋವು ಕಣ್ಣೀರಾಗಿ ಕಪಾಳದ ಮೇಲೆ ಬರುತ್ತಿರುವಾಗಲೇ ಹೆಂಡತಿಗೆ ಒಂದು ಹಗ್ಗ ಕೊಟ್ಟು ತಾನು ನೇಣು ಬಿಗಿದು ಕೊಂಡು ಇಹ ಲೋಕ ತ್ಯಜಿಸುತ್ತಾನೆ. ಇದು ಒಂದು ಸಣ್ಣ ಘಟನೆ ಮಾತ್ರ ಆದರೆ ಇವತ್ತು ಕೈಗಾರಿಕೆಯ ಹೆಸರಲ್ಲಿ ಸರಕಾರ ಒಕ್ಕಲೆಬ್ಬಿಸಿದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂತ ಸಾವಿರ ಸಾವಿರ ದೃಶ್ಯ ಕಂಡು ಬರುತ್ತವೆ.

ಒಂದು ರಾಜ್ಯ, ಒಂದು ದೇಶ ಅಭಿವೃದ್ಧಿ ಹೊಂದಿ ವಿಶ್ವದ ಭೂ ಪಟದಲ್ಲಿ ತನ್ನ ಸ್ಥಾನ ಗುರುತಿಸಿಕೊಳ್ಳಲು ಕೈಗಾರಿಕೆಗಳ ಸ್ತಾಪನೆ ಅಗತ್ತ್ಯ. ಬರಿ ಅಭಿವೃದ್ಧಿ ಅಷ್ಟೇ ಅಲ್ಲ ಆ ದೇಶದ ಜನರಿಗೆ ಕೈ ತುಂಬ ಕೆಲಸ ಕೊಟ್ಟು, ಅವರ ಜೀವನ ಸುಖಕರವಾಗಿಸಲೂ ಕೈಗಾರಿಕೆ ಅತ್ತ್ಯಗತ್ತ್ಯ. ಇಂತ ಒಂದು ಪ್ರಯತ್ನ ನಮ್ಮ ಕರ್ನಾಟಕ ಸರಕಾರದಿಂದ 'ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ' ದ ಹೆಸರಲ್ಲಿ ಜೂನ್ 3 ಮತ್ತು 4 ರಂದು ಬೆಂಗಳೂರಿಲ್ಲಿ ನಡೆದದ್ದು ಶ್ಲಾಘನೀಯ.
ವಿಶ್ವದ ಎಲ್ಲ ಹೂಡಿಕೆದಾರರು ಇದರಲ್ಲಿ ಬಾಗವಸದೆ ಇದ್ದರೂ ದೇಶದ ಮತ್ತು ವಿದೇಶದ ಕೆಲವು ಪ್ರಮುಖ ಬಂಡವಾಳ ಹೂಡಿಕೆದಾರರನ್ನು ಒಂದೇ ಸೂರಿನಡಿ ತಂದು ಸುಮಾರು ನಾಲ್ಕು ಲಕ್ಷ ಕೋಟಿಯ ರುಪಾಯಿಯ ವಹಿವಾಟಿಗೆ ಕರ್ನಾಟಕದಲ್ಲಿ ವೇದಿಕೆ ಸಜ್ಜುಗೊಳಿಸಲು ನಾಂದಿ ಹಾಡಿರುವದು ಸಂತೋಷ ಹಾಗು ಮೆಚ್ಚತಕ್ಕ ವಿಷಯವೇ. ಬಾಗವಹಿಸಿ, ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವದಾಗಿ ಬರವಸೆ ಕೊಟ್ಟಿರುವವರೆಲ್ಲ ಕೈಗಾರಿಕೆ ಸ್ತಾಪನೆ ಮಾಡುತ್ತಾರೋ ಇಲ್ಲವೋ ಆದರೆ ಆ ದಿಶೆಯಲ್ಲಿ ಪ್ರಯತ್ನ ಸಾಗಿರುವದು ಒಂದು ಹೆಮ್ಮೆಯ ವಿಷವೆಯೇ.

ಸೂಕ್ಹ್ಮವಾಗಿ ಗಮನಿಸಿದರೆ ಈ ಸಾರಿಯ ಸಮಾವೇಶದಲ್ಲಿ ಆಗಿರುವ 4 ಲಕ್ಷ ಕೋಟಿ ರುಪಾಯಿ ಒಡಂಬಡಿಕೆಯಲ್ಲಿ ಅರ್ದಕಿಂತ ಹೆಚ್ಚು ಅಂದರೆ 2.21 ಲಕ್ಷ ಕೋಟಿ ರುಪಾಯಿ ಮೊತ್ತದ 38 ಯೋಜನೆಗಳು ಕಬ್ಬಿಣ ಮತ್ತು ಉಕ್ಕು ಉದ್ಯಮದ್ದೆ. ಹೀಗಾಗಿ ಇದನ್ನ Global Investors Meet ( GIM ) ಬದಲು Steel Investors Meet (SIM) ಅಂತ ಟೈಮ್'ಸ್ ಆಫ್ ಇಂಡಿಯಾ ದಿನ ಪತ್ರಿಕೆಯಲ್ಲಿ ಹೇಳಿರುವದು ಸೂಕ್ತವೆ. ನಮಗೆಲ್ಲ ಗೊತ್ತಿರುವ ಹಾಗೆ ಬೇರೆ ಎಲ್ಲ ಉದ್ಯಮಗಳಿಗಿಂತ ಈ ಕಬ್ಬಿಣ ಮತ್ತು ಉಕ್ಕು ಉದ್ಯಮಕ್ಕೆ ಭೂಮಿ,ನೀರು ಹೆಚ್ಚಿಗೆ ಬೇಕು. ಸರಕಾರವೇ ಹೇಳಿರುವ ಹಾಗೆ 1 ಲಕ್ಷ ಎಕರೆ ಜಮೀನನ್ನು ಹೋಶ ಪಡಿಸಿಕೊಳ್ಳಲು ಸಿದ್ದತೆ ನಡಿದಿದೆ . ಈ ಒಂದು ಲಕ್ಷ ಜಮೀನಿನಲ್ಲಿ ಎಷ್ಟು ಎಕರೆ ನೀರಾವರಿ ಹಾಗು ಊಳಲು ಯೋಗ್ಯವಾದ ಭೂಮಿ ಇರುತ್ತೆ ಅನ್ನೋದೇ ಚಿಂತೆ. 2000-01 ರಲ್ಲಿ Ministry of Agriculture ಹೊರಡಿಸಿರುವ ಪ್ರಕಟನೆಯಂತೆ ನಮ್ಮ ರಾಜ್ಯದಲ್ಲಿ ಇರುವ ಒಟ್ಟು ನೀರಾವರಿ ಭೂಮಿ Net Irrigated Area (NIA) 2643 ಸಾವಿರ ಹೆಕ್ಟೇರ್ ಗಳು ಅಂದ್ರೆ ಸುಮಾರು 66 ಲಕ್ಷ ಎಕರೆ ಮತ್ತು ಒಟ್ಟು ಬಿತ್ತಲು ಯೋಗ್ಯವಾಗಿರುವ ಭೂಮಿ Net Sown Area (NSA) 10410 ಸಾವಿರ ಹೆಕ್ಟೇರ್ ಗಳು ಅಂದ್ರೆ ಸುಮಾರು 2 ಕೋಟಿ ಎಕರೆಗೂ ಅಧಿಕ. ಇಷ್ಟು ಭೂಮಿಯಲ್ಲಿ ಈಗಾಗಲೇ ಎಷ್ಟು ಭೂಮಿ ಅಭಿವೃದ್ಧಿ ಹೆಸರಲ್ಲಿ, ರಿಯಲ್ ಎಸ್ಟೇಟ್ ಹೆಸರಲ್ಲಿ, ಭೂ ಮಾಫಿಯ ಹೆಸರಲ್ಲಿ ಕಬಳಿಕೆಯಾಗಿದೆಯೋ ಮತ್ತು ಹೆತೆಚ್ಚವಾಗಿ ಗೊಬ್ಬರ ಮತ್ತು ರಾಸಾಯನಿಕ ಬಳಕೆಯಿಂದ ಎಷ್ಟು ಭೂಮಿ ತನ್ನ ಸಾರವನ್ನು ಕಳೆದುಕೊಂಡು ಊಳಲು ಅಯೋಗ್ಯವಗಿದೆಯೋ ಗೊತ್ತಿಲ್ಲ. ಶೇಕಡಾ 65 ಕಿಂತ ಹೆಚ್ಚಿಗೆ ಜನರು ಇಂದಿಗೂ ಕೃಷಿಯನ್ನೇ ತಮ್ಮ ಬದುಕಾಗಿಸಿಕೊಂದಿದ್ದಾರೆ ಮತ್ತು ಅದರಲ್ಲೇ ಬದುಕುತಿದ್ದಾರೆ. ಇಂತ ಸಂದರ್ಬದಲ್ಲಿ ನಮ್ಮ ಸರಕಾರಗಳು ಕೈಗಾರಿಕೆ ಹೆಸರಲ್ಲಿ ಬೆಳೆಯಲು ಯೋಗ್ಯ ಮತ್ತು ನೀರಾವರಿ ಭೂಮಿಯನ್ನು ಕಿತ್ತುಕೊಂಡು ಬಿಟ್ಟರೆ ನಮ್ಮ ರೈತಾಪಿ ಜನಗಳ ಹೊಟ್ಟೆಯ ಗತಿಯೇನು. ಅಷ್ಟೇ ಅಲ್ಲ ಬೆಳೆ ಕಡಿಮೆ ಆದಂತ ಆಹಾರದ ಉತ್ಪಾದನೆ ಕಡಿಮೆಯಾಗುತ್ತದೆ. ಹೀಗೆ ಮುಂದುವರೆದರೆ ನಾಳೆ ತಿನ್ನಲು ಅಕ್ಕಿಯೂ ಸಿಗದಾದಾಗ ದುಡ್ಡನ್ನು ಇಲ್ಲ ಕಾರ್ಖಾನೆಗಳು ಮತ್ತು ಕಂಪನಿಗಳು ಉತ್ಪದಿಸಿಸುವ ಕಬ್ಬಿಣ, ಉಕ್ಕು ಇಲ್ಲ ಸಾಫ್ಟ್ವೇರ್ ನ ತಿನ್ನೋಕೆ ಆಗುತ್ತಾ?

ನೀತಿ ನಿಯಮಗಲಿಲ್ಲದೆ ಗಣಿಗಾರಿಕೆಗೆ ಪರವಾನಿಗೆ ಕೊಟ್ಟ ಪರಿಣಾಮ ಇವತ್ತು ಬಳ್ಳಾರಿಯಲ್ಲಿ ಅಷ್ಟೇ ಅಲ್ಲ ಗಣಿಯಿಂದ ಎದ್ದ ದೂಳು ಪಕ್ಕದ ಜಿಲ್ಲೆ ರಾಜ್ಯಗಳಿಗೂ ಹರಡಿ ನಮ್ಮ ಜನ ದೂಳನ್ನೇ ತಿಂದು ದೂಳನ್ನೇ ಉಸಿರಾಡುವಂತಾಗಿದೆ. ವೈಜ್ಞಾನಿಕ ವಿಧಿ ವಿಧಾನಗಳೆಲ್ಲವನ್ನು ಗಾಳಿಗೆ ತೊರಿ ಇವತ್ತು ಈ ಕಾರ್ಖಾನೆಗಳು ಹೊರಸೂಸುವ ಆರೋಗ್ಯ ಹಾನಿಕಾರಕ ರಾಸಾಯನಿಕ ವಸ್ತುಗಳು ನಮ್ಮ ಕಾವೇರಿ, ತುಂಗಾ ಭದ್ರ ಮತ್ತು ಕೃಷ್ತ್ನ ಗಳಂತ ನದಿಗಳನ್ನು ಮತ್ತು ಪರಿಸರವನ್ನು ಕಲುಸಿತ ಮಾಡಿವೆ. ರಾಯಚೂರಿನ ಥರ್ಮಲ್ ಪವರ್ ಸ್ಟೇಷನ್ ನಿಂದಾಗಿ ಬೇರೆಲ್ಲ ಜಿಲ್ಲೆಗಳಿಗಿಂತ ಮೂರರಿಂದ ನಾಲ್ಕು ಡಿಗ್ರೀಯಷ್ಟು ಬಿಸಿಲ ಶಾಕ ಹೆಚ್ಚಾಗಿ ದಿನವೂ ಬೆರವುತಿದ್ದೇವೆ. ವಿಪರ್ಯಾಸ ಅಂದ್ರೆ ರಾಜ್ಯಕ್ಕೆ ಬೆಳಕು ಕೊಡೊ ಥರ್ಮಲ್ ಸ್ಟೇಷನ್ ರಾಯಚೂರನ್ನು ಮಾತ್ರ ಸದಾ ಕತ್ತಲಲ್ಲೇ ಇಟ್ಟಿದೆ. ಸರಕಾರಗಳ ತಲೆಯಿಲ್ಲದ ಆದೇಶಗಲಿಂದಾಗಿ ಭೂಮಿ ಕಳೆದುಕೊಂಡು, ಕೈಗಾರಿಕೆ ಗಳ ಮಾಲಿಕರ ಲಾಭದ ಆಶೆಗೆ ನಮ್ಮ ಆರೋಗ್ಯವನ್ನು ಬಲಿಕೊಟ್ಟು ಪ್ರತ್ಯಕ್ಷವಾಗಿ ಪರೋಕ್ಷವಾಗಿ ದಿನವೂ ಸತ್ತು ಬದುವುದುಕಿಂತ ನೇರವಾಗಿ ಒಮ್ಮೆ ನಮ್ಮೆಲ್ಲ ರೈತರನ್ನು ಒಂದು ಮೈದಾನದಲ್ಲಿ ಒಟ್ಟುಗೂಡಿಸಿ ಜಲಿಯನ್ ವಾಲಾಭಾಗ್ ರೀತಿ ಗುಂಡಿಕ್ಕಿ ಕೊಂಡು ಬಿಡಿ, ಇಲ್ಲ ಮುಂಬೈ ದಾಳಿಯ ರೀತಿ ಸಿಕ್ಕ ಸಿಕ್ಕವರನ್ನು ಬಂದೂಕಿನಿಂದ ಸುಟ್ಟು ಬಿಡಿ. ಸಾಯುವ ಅರೆಗಳಿಗೆಯಲ್ಲಿ ನಮ್ಮನ್ನು ಭಾರತಿಯ ಬ್ರಿಟಿಶ್ ಸರಕಾರ ಕೊಂದಿತು ಎಂದೋ ಅಥವಾ ಪಾಕಿಸ್ತಾನ್ ಉಗ್ರರಂತೆ ನಮ್ಮ ಸರಕಾರ ನಮ್ಮನ್ನೇ ಕೊಂದಿತೆಂದು ಶಪಿಸಿ ಸಾಯಿತ್ತಾರೆ. ಅನಂತರ ಅವರ ಸಮದಿಗಳ ಮೇಲೆ ನಿಮ್ಮ ಕೈಗಾರಿಕೆಯ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಬಹುದು.

ನಾವ್ಯಾರೂ ಕೈಗಾರಿಕಾ ವಿರೋಧಿಗಲ್ಲ, ಆದರೆ ಕೈಗಾರಿಕೆ ಹೆಸರಲ್ಲಿ ರೈತನ ಹೊಟ್ಟೆ ಮೇಲೆ ಹೊಡೆಯೋದು ಎಷ್ಟು ಸರಿ? ರೈತನ ಮಗನಾಗಿ, ರೈತರ ಕಷ್ಟ ಸುಖಗಳನ್ನು ಆಳವಾಗಿ ಅರಿತಿರುವ ನಮ್ಮ ಮುಖ್ಯ ಮಂತ್ರಿಗಳು ಬಂಡವಾಳ ಹೂಡುವವರಿಗೆ ರತ್ನ ಗಂಬಳಿ ಹಾಸುವ ಅರತುರಿಯಲ್ಲಿ ನಮ್ಮ ರೈತರ ಹಿತಸ್ತಕ್ತಿ ಮರೆಯದಿರಲಿ. ಫಲವತ್ತಾದ ನೀರಾವರಿ ಮತ್ತು ಊಳಲು ಯೋಗ್ಯವಾದ ಭೂಮಿಯನ್ನು ರೈತರಿಂದ ಕಿತ್ತಿಕೊಂಡು ಅವರನ್ನು ಸಾವಿನ ನೇಣು ಕಾಣಿಕೆಗೆ ದೂಕದಿರಲಿ. ನಾಲ್ಕು ಲಕ್ಷ ಕೋಟಿ ರುಪಾಯಿ ವ್ಯಹಾರದ ಗುಂಗಲ್ಲಿ ಆರು ಕೋಟಿ ಕನ್ನಡಿಗರ ಜೀವನದ ದೀಪ ಆರಿಸದಿರಲಿ. ವಿವೇಚನೆಯ ನಿರ್ಧಾರಗಳನ್ನು ತೆಗೆದುಕೊಂಡು ರೈತರನ್ನೂ ಕಾಪಾಡಿ, ಕೈಗಾರಿಕೆ ಬೆಳೆಯಲು ಅನುವು ಮಾಡಿಕೊಡಿ.

Sunday, August 15, 2010

ನಿನ್ನ ಹಸಿ ತಲೆ ಕೂದಲು ಇನ್ನೂ ಆರಿಲ್ಲ ನನ್ನ ಬುಜದ ಮೇಲೆ.....

ಇಲ್ಲ ಚಿನ್ನ, ನಿನ್ನ ಮರಿಯೋಕೆ ಆಗ್ತಾ ಇಲ್ಲ, ನಿನ್ನ ಅಷ್ಟೇ ಅಲ್ಲ, ನಿನ್ನ ಮರೆಯಬೇಕು ಅನ್ನೋದೇ ಮರೇತು ಹೋಗಿದೆ. ಮೌನ ಮಾತಾಗಿ ಮಾತು ಬದುಕಾಗುತ್ತೆ ಅಂತಾರೆ, ಆದರೆ ಇಲ್ಲಿ ಅದಕ್ಕೆ ವಿರುಧ್ಧ ಆಗಿದೆ ಕಣೆ ನೀನಿಲ್ಲದೆ.ದೇವರು ಎಷ್ಟು ಕಟೋರಿ ಅಲ್ವ? ಹೆಣ್ಣಿಗೆ ತಾಳ್ಮೆ ಕೊಟ್ಟ, ಅದು ಮೀರಿದಾಗ ದುಖ: ಹೊರ ಹಾಕಲು ಕಣ್ಣೀರು ಕೊಟ್ಟ, ಹಿಂದಿನದೆಲ್ಲವನೂ ಮರೆಯುಲು ಮರೆವು ಕೊಟ್ಟ, ಕೊಟ್ಟಿದ್ದೆಲ್ಲವನ್ನೋ ಧಾರಾಳವಾಗಿ ಉಪಯೋಗಿಸುವ ಅವಕಾಶ ನೀಡಿದ. ನಂಗೂ ತಾಳ್ಮೆ ಕೊಟ್ಟಿದ್ದಾನೆ, ಆದರೆ ತಾಳಿದಷ್ಟೂ ನಾನು ಏನೋ ಕಳೆದುಕೊಳ್ತಾ ಇದ್ದೀನೇನೋ ಅನ್ನೊ ದುಗುಡ ಇಟ್ಟಿದ್ದಾನೆ. ದುಖ: ತಡಿದೆ ಕಣ್ಣೇರು ಹಾಕಿದರೆ ಇವ ಗಂಡಸೇ ಅಲ್ಲ ಅನ್ನುವಂತ ಸಮಾಜ ಸೃಸ್ಟಿಸಿದ್ದಾನೆ. ಇನ್ನು ಮರೆವು ಕೊಡೋದೇ ಆತ ಮರೆತ ಅಂತ ಕಾಣುತ್ತೆ, ಏನಿದ್ರು God is great ಕಣೆ.

ಇವತ್ತು ನಾವು ಆಫೀಸ್ಗೆ ಹೋಗುತ್ತಿದ್ದ ಬಸ್ಸು ನೋಡಿದೆ ಕಣೆ. ಅದೇ ನಮ್ಮ ಓಲ್ಡ್ ಬಸ್ ಸ್ಟಾಪ್ ಅತ್ರ , ಹೇಗಿತ್ತೋ ಆಗೇ ಇದೆ, ನನ್ನ ನಿನ್ನ ಬಿಟ್ಟು. ಆ ಬಾಗಿಲ ಹಿಂದಿನ ಕಿಡಿಕಿ ಸೀಟ್ ಕಾಲಿ ಕಾಲಿ. ಪ್ರತಿ ದಿನ ಐದು ನಿಮಿಷ ಲೇಟ್ ಆಗಿ ಸ್ಟಾಪ್ ತಲುಪುತ್ತ ಇದ್ದೆವು. ಓಡೋಡಿ ಬಂದು ಬಸ್ ಒಳ ಹೊಕ್ಕು ಎದೆಯುಸಿರು ಬಿಡುತ್ತ ಒಬ್ಬರಿಗೊಬ್ಬ ಮುಖ ಮುಖ ನೋಡಿ ಗೊಳ್ಳೆಂದು ನಕ್ಕು ಸುತ್ತ ಮುತ್ತಲಿನ ಸಿಟ್ಟಿನ ನೋಟದ ಕಂಗಳಿಗೆ ಒಂದು sorry ಹೇಳಿ ನೀನು ಕಿಡಿಕಿ ಕಡೆ, ನಿನ್ನ ಪಕ್ಕ ನಾನು ಒಂದೇ ಸೀಟ್ ನಲ್ಲಿ ಕುಳಿತರೆ ಅಲ್ಲಿಗೆ ಜಗತ್ತೆ ಮರೆತು ಹೋಗುತಿತ್ತು. ಬೀಸುವ ಪ್ರತಿ ಸಲದ ಆ ಗಾಳಿಗೆ ನಿನ್ನ ಆ ಹಸಿ ಉದ್ದು ಕೂದಲು ನನ್ನ ಮುಖದ ಮೇಲೆ ಬಿದ್ದು, ನೀರು ಗುಳ್ಳೆ ಮೂಡಿಸುತಿದ್ದಾಗ ನನ್ನದೆಯ ಬಡಿತ ಹಿಡಿತ ತಪ್ಪುತ್ತಾ ಇತ್ತು. ಅದೇಕೆ ಅಷ್ಟು ನಾಚಿ ನೀರಗ್ತಾ ಇದ್ದೆ ನಿನ್ನ ಕೂದಲು ನನ್ನ ಬಿಳಿ ಶರ್ಟ್ ಮೇಲೆ ಉದುರಿ ಬಿದ್ದಾಗ?. ಜಗತ್ತಿನಲ್ಲಿ ಎಷ್ಟೋ ತರದ ಶಂಪೋಗಳು ಇವೆ ಆದರೆ ನೀನು ಬಳಸುತ್ತಿದ್ದ ಶಂಪೋ ಯಾವ ಕಂಪನಿ ತಯಾರಿಸುತ್ತಿತ್ತೋ. ಆ ನಿನ್ನ ತಲೆ ಕೂದಲಿನ ಸಂಪು ಸಂಪು ಸುವಾಸನೆ ಇಡಿ ದಿನ ನನ್ನ ದಣಿಯದಂತೆ ಕೆಲಸ ಮಾದಿಸುತಿತ್ತು. ರೇಡಿಯೋದಲ್ಲಿ FM ಆನ್ ಮಾಡಿ ನಾನೊಂದು ನೀನೊಂದು ಕಿವಿಗೆ ಹಿಯರ್ ಫೋನ್ ಹಾಕಿಕೊಂಡು ಎಷ್ಟು ಹಾಡು ಗುನು ಗುನಿಸಿ ಪಕ್ಕದಲ್ಲಿದ್ದೊರಿಗೆ irritate ಮಾಡುತಿದ್ದೆವಲ್ಲ. ದುನಿಯಾ ಚಿತ್ರದ ‘ಕರಿಯ I love you, ಕರುನಾಡ ಮೇಲಾಣೆ’ ಹಾಡು ಬಂದಾಗ ನೀ ಅದರ ಸಾಹಿತ್ಯ ಬದಲಿಸಿ ನನ್ನ ಛೇಡಿಸಲು ‘ಕರಿಯ I hate you, ನಿನ್ನ ಮೇಲಾಣೆ’ ಅಂತ ಹಾಡ್ತಾ ಇದ್ದೆ. ನಾ ಕರಿಯ ಆದರೆ ಮನಸು ತು೦ಬ ಬಿಳಿದಿತ್ತು ಕಣೆ, ಇವತ್ತಿಗೂ ಆ ಹಾಡು ಎಲ್ಲಿ ಹೇಳಿದರು ಒಂದು ಕ್ಷಣ ನಿಂತು ಬಿಡ್ತೀನಿ. ಒಂದು ವಿಷ್ಯ ಗೊತ್ತ?, ಎಲ್ಲರು ಬೆಂಗಳೂರಿನ ರಸ್ತೆಗಳು ಚೆನ್ನಗಾಗಲಿ, ಟ್ರಾಫಿಕ್ ಕಡಿಮೆ ಆಗಲಿ ಅಂತ ಬೇಡಿಕೊಳ್ತಾರೆ ಆದರೆ ನಾನು ಮಾತ್ರ ರಸ್ತೆ ತುಂಬ ದೊಡ್ಡ ದೊಡ್ಡ ಕಂದಕಗಳೆ ಬೀಳಲಿ ಅಂತ ದೇವರಲ್ಲಿ ಪ್ರಾರ್ತನೆ ಮಾಡ್ತಾ ಇದ್ದೆ. ಯಾಕೆ ಗೊತ್ತ? ಪ್ರತಿ ಬಾರಿ ನಮ್ಮ ಬಸ್ ಕಂದಕದಲ್ಲಿ ಇಳಿದು ಮೇಲೆಳುವಾಗ ನೀನು ನನ್ನ ಮೇಲೆ ಬೀಳುತ್ತಾಯಿದ್ದೆ, ಹೇಗೆ ಮರೆಯಲ್ಲಿ ಪ್ರಿಯೆ ನಿನ್ನ ಆ ಬೆಚ್ಚಗಿನ ತೋಳಿಲ್ಲದ ಕೈಯ ಸ್ಪರ್ಶ. ನಿಜ ಹೇಳ್ತಾ ನನ್ನಲ್ಲಿ ನಾನು ಹುಡುಗನನ್ನು ಕಂಡಿದ್ದೆ ಆವಾಗ. ಹೋಗ್ತಾ ಹೋಗ್ತಾ ನೀ ನಿದ್ದೆಗೆ ಜಾರಿ ನನ್ನ ಬುಜದ ಮೇಲೆ ತಲೆಯಿಟ್ಟು ಮಲಗಿರುವಾಗ ನನ್ನಲ್ಲಿ ನನಗೆ ಏನೋ ಒಂದು ಹೆಮ್ಮೆ. ಅದೆಂತದ್ದೋ ಗರ್ವ. ಹಿಗ್ಗಿ ಹೆದೆವುಬ್ಬಿಸಿ ಕುಳಿತು ಕೊಳ್ತಾ ಇದ್ದೆ. ಆಫೀಸ್ ತಲುಪೋದೆ ಗೊತ್ತಾಗ್ತಾ ಇರ್ಲಿಲಿಲ್ಲ.

ಇವತ್ತು ನೀನೆಲ್ಲೋ ನಾನೆಲ್ಲೋ, ಬದುಕು ಎಷ್ಟು ವಿಚಿತ್ರ ಅನ್ನಿಸುತ್ತೆ. ಎಲ್ಲೋ ಇದ್ದೆವು ಹೇಗೋ ಬೇಟಿ ಆಯ್ತು, ಪ್ರೀತಿ ಹುಟ್ಟಿತು, ಹುಟ್ಟಿದಷ್ಟೇ ಬೇಗ ಸತ್ತು ಹೋಯ್ತು. ಬೇಟಿ, ಹುಟ್ಟು , ಸಾವು ಯಾವು ಕಾರಣ ಇಲ್ಲದೆ ಬಂದವು, ಕಾರಣ ಹೇಳದೆ ಹೋದವು. ನೆನಪುಗಳನ್ನ ಕಾಣಿಕೆಯಾಗಿ ಬಿಟ್ಟು ಎಲ್ಲ ಮರೆಯಾದವು. ಏನಿದ್ರು God is great ಕಣೆ.
-Rajashekara Gouda