Saturday, August 3, 2013

ಅರ್ಥ ಆಗಲಿ ಪ್ರೀತಿ, ಸಾರ್ಥಕ ಆಗಲಿ ಬದುಕು.

       

           ಒಮ್ಮೊಮ್ಮೆ ನಾವು ನೋಡ್ತಾ ಇರೋ ನ್ಯೂಸ್ ಚೆನ್ನಾಗಿರದಿದ್ದರೂ ನ್ಯೂಸ್ ಓದುತ್ತಿರೋ ಹುಡಿಗಿ ಚೆನ್ನಾಗಿದ್ದಾಳೆ ಅಂತ ನ್ಯೂಸ್ ನೋಡ್ತಾ ಇರ್ತೇವಿ. ಹಾಗೆ ಇವತ್ತು ನಾನು ಅಟೆಂಡ್ ಮಾಡ್ತಾ ಇರೋ ಮದುವೆ ಇಷ್ಟ ಇರದಿದ್ದರೂ, ಆ ಮದುವೆಯಿಂದ ಒಂದು ಹುಡಿಗಿ ಜೀವನದಲ್ಲಿ ನೆಲೆ ಕಾಣುತ್ತಾಳಲ್ಲ ಅನ್ನೋದೇ ಹೆಚ್ಚು ಖುಷಿ ಕೊಡ್ತಾ ಇದೆ.

            ಮಳೆ ಅಂದ್ರೆ ಎಲ್ಲ ಹದಿ ವಯಸ್ಸಿನ ಹುಡಿಗಿಯರಿಗೂ ಇಷ್ಟ ಆದ್ರೆ ಅದೇ ಮಳೆ ತನ್ನ ಮದುವೆ ಆಗಿ ಇನ್ನೇನು ಮೆರವಣಿಗೆ ಹೋರಡಬೇಕು ಅನ್ನೋ ಟೈಮ್ ನಲ್ಲಿ ಗುಡುಗು ಸಿಡಿಲಿನ ಸಮೇತ ವಕ್ಕರಿಸಿಕೊಂಡು ಬಿಟ್ಟರೆ ಆ ಹುಡಿಗಿ ಮಳೇನ ಸಕತ್ ಬಯ್ಯುತ್ತಾಳೆ. ಯಾಕೆ ಹೇಳಿ? ಮಳೆ ಬರಬೇಕಾದ ಟೈಮ್ ನಲ್ಲಿ ಬಂದರೆ ಬೆಳೆ ಬೆಳೆಯುತ್ತದೆ. ರೈತನ ಜೀವ ಉಳಿಯುತ್ತದೆ. ಹಾಗೆ ಪ್ರೀತಿ ಮಾಡೋ ಟೈಮ್ ನಲ್ಲಿ ಪ್ರೀತಿ ಆಯಿತು ಅಂದ್ರೆ ಪ್ರೇಮಿ ಜೀವನ ಬೆಳಗುತ್ತೆ, ಮದುವೆ ಆಗುತ್ತೆ, ಮುಂದೆ ಎಲ್ಲ ಸರಿ ಇದ್ದರೆ ಮಕ್ಕಳು ಆಗುತ್ತವೆ. ಅವುಗಳ ಹಲ್ಲು ಉಜ್ಜಿ, ತಲೆ ಬಾಚಿ, ಡ್ರೆಸ್ ಹಾಕಿ ಸ್ಕೂಲ್ ಬಸ್ ನಲ್ಲಿ ಕುಳ್ಳಿರಿಸಿ ಟಾ ಟಾ ಬಾಯ್ ಬಾಯ್ ಅಂತ ಹೇಳಿ ಸಂತೋಷ ಪಡುವ ಸುಂದರ ಸಂಸಾರ ಆಗುತ್ತೆ. ಆದ್ರೆ ನನ್ನ ಜೀವನದಲ್ಲೂ ಸರಿಯಾದ ಸಮಯದಲ್ಲಿ ಮಳೆ ಆಯಿತು ಬಟ್ ನಾನು ಕೊಡೆ ಹಿಡಿದೆ, ಪ್ರೀತಿ ಹುಡಿಕಿಕೊಂಡು ಬಂದಿತ್ತು ಆದ್ರೆ ನಾನು ತಡೆ ಹಿಡಿದೆ.

          ಹರಳುವ ಹೂವಿಗೂ ಗೊತ್ತಿರೊಲ್ಲ ತಾನು ದೇವರ ಪಾದ ಸೇರ್ತೀನಾ ಇಲ್ಲ ಡಸ್ಟ್ ಬಿನ್ ಸೇರ್ತೀನ ಅಂತ. ಬೀಳುವ ಪ್ರತಿ ಹನಿಗೂ ಗೊತ್ತಿರೋಲ್ಲ ತಾನು ನದಿಯಲ್ಲಿ ಬಿದ್ದು ಸಾಗರ ಸೇರ್ತೀನ ಅಥವಾ ಕೊಚ್ಚೆ ಗುಂಡೀಲಿ ಬಿದ್ದು ಕೆರೆ ಸೇರ್ತೀನಾ ಅಂತ. ಹಾಗೆ ಪ್ರೀತಿಸುವ ಪ್ರತಿ ಹುಡುಗನಿಗೂ ಗೊತ್ತಿರೋಲ್ಲ ಆ ಹುಡಿಗಿ ತನ್ನ ಶ್ರೀಮತಿ ಆಗ್ತಾಳ ಇಲ್ಲ ಇನ್ನೊಬ್ಬನ ಜೊತೆ ಸಿಂಗರಿಸಿದ ಮದುವೆ ಮಂಟಪ ಸೇರ್ತಾಳಾ ಅಂತ. ನನ್ನ ವಿಷಯದಲ್ಲಿ ಅವಳು ನನ್ನ ಮೇಲೆ ಪ್ರೀತಿಯ ಸಿಂಚನ ಮಾಡಿದಳು ನಾನು ಆ ಸಿಂಚನಕ್ಕೆ ಮೊಳಕೆಯೋಡೆಯಲೇ ಇಲ್ಲ. ಗಿಡವಾಗಲಿಲ್ಲ, ಹೂ ಹರಳಲೇ ಇಲ್ಲ. ಅವಳು ಬೇಸತ್ತು ಬೇರೊಂದು ಗಿಡದ ಬುಡಕ್ಕೆ ತಂಪೆರೆದು ತಣಿಸಲು ಗಂಗೆಯಾಗಿ ಹೊಗುತ್ತಿದ್ದಾಳೆ.

        ಪ್ರೀತಿ ನಿವೇದನೆ ಮಾಡುವಾಗ ಪ್ರತಿಯೊಬ್ಬ ಹುಡುಗನಿಗೆ ಅನ್ನಿಸ್ತಾ ಇರುತ್ತೆ ಈ ಹುಡಿಗಿ ಮಿಸ್ ಆದರೆ ಇಂತ ಒಳ್ಳೆ ಹುಡಿಗಿ ಮತ್ತೆಂದು ಸಿಗೋಲ್ಲ ಅಂತ. ಆದ್ರೆ ಎಲ್ಲ ಮಾತುಕತೆ ಮುಗಿದು ತಾಳಿ ಕಟ್ಟುವ ಕಟ್ಟಾ ಕಡೆ ಗಳಿಗೆಯಲ್ಲಿಯೂ ಇನ್ನು ಸ್ವಲ್ಪ ಹುಡಿಕಿದ್ದರೆ ಇದಕ್ಕಿಂತ ಒಳ್ಳೆ ಹುಡಿಗಿ ಸಿಗ್ತಾ ಇದ್ದಳೆನೋ ಅಂತ ಅನ್ನಿಸ್ತಾ ಇರುತ್ತೆ ಈ ಅರೆಂಜ್ ಮ್ಯಾರೇಜ್ ನಲ್ಲಿ. ಬಟ್ ಆ ಒಳ್ಳೆ ಹುಡಿಗಿ ಅನ್ನೋದರ ಅರ್ಥ ಪ್ರೀತಿ ಮಾಡುವವನಿಗೂ ಗೊತ್ತಿರೋದಿಲ್ಲ ಮದುವೆ ಮಾಡಿಕೊಳ್ಳುವವನಿಗೂ ಗೊತ್ತಿರುವದಿಲ್ಲ. ನನ್ನನ್ನು ಪ್ರೀತಿಸಿ ಇವತ್ತು ಬೇರೊಬ್ಬನ ಜೊತೆ ಮದುವೆ ಮಾಡಿಕೊಳ್ತಾ ಇರೋ ಆ ಹುಡಿಗಿ, ತನ್ನ ಹುಡುಗನಿಗೆ ಅರ್ಥ ಆಗುವ ಪ್ರೀತಿ ಕೊಡಲಿ. ಸಾರ್ಥಕ ಬದುಕು ಕಟ್ಟಿಕೊಡಲಿ. ಶುಭವಾಗಲಿ.


 -Raj..

Saturday, November 13, 2010

ನೀನೊಂದು ಯಕ್ಷ ಪ್ರಶ್ನೆ ಗೆಳತಿ ನನಗೆ




ಬದುಕು ಬೇಡವೆಂದು ಬಲಗಾಲಿನಿಂದ ಒದ್ದಾಗ
ಬಿದ್ದು ಒದ್ದಾಡುತಿದ್ದ ನನ್ನ ಮುದ್ದು ಮಾಡಿ ಎಬ್ಬಿಸಿದವಳು ನೀನು
ಎದ್ದವನು ಗೆದ್ದು ಮೆರೆವ ಹೊತ್ತಿಗೆ ಸದ್ದೇ ಮಾಡದೆ ಸರಿದು ಹೋದೆ ಎಲ್ಲಿಗೆ?

ಸವಿಗನಸು ಕಾಣುವ ಕಣ್ಣಿಗೆ ಕಾರಿದ ಪುಡಿ ಎರಚಿ
ಮಕಾಡೆ ಮಲಗಿಸಿತ್ತು ಈ ಸಾವಿಲ್ಲದ ಸಮಯ
ಸಮಯಕ್ಕೆ ಸಡ್ಡು ಹೊಡೆದು ದಿಕ್ಸೂಚಿಯಾದವಳು ದಿಗಂತವನ್ನೇಕೆ ದಾಟಿ ಹೋದೆ?

ಕುಣಿವ ಕಾಂಚಾಣ ಕೈಯಲ್ಲಿದ್ದಾಗ ಮನೆ ತುಂಬಾ ಬಂದುಗಳು
ಕಾಂಚಾಣ ಕೈ ಕೊಟ್ಟು, ಬಂದು ಬಳಗವೆಲ್ಲ ಬಾಯಿ ತೆರೆದು ಹುಗಿತಿರುವಾಗ
ನನ್ನಲ್ಲಿ ಹುದುಗಿದ್ದ ಶಕ್ತಿಯೆಲ್ಲ ಒಗ್ಗೂಡಿ ಹೋರಾಟದ ಕಿಚ್ಚು ಹಚ್ಹ್ಚಿದವಳು ಹೊರಟೆ ಎಲ್ಲಿಗೆ?

ಜಗತ್ತು ಜಾಲಿ ಕಲ್ಲಿನಿಂದ ಹುಚ್ಚನೆಂದು ಹೊಡಿಯುತ್ತಿರುವಾಗ
ನೀರು ನೆರಳಿಲ್ಲದೆ ನರಳಿ ನರಳಿ ಸಾಯುವಾಗ
ಪ್ರೀತಿಯ ಗುಟುಕು ಕೊಟ್ಟು ಜೀವಕೆ ಜೀವ ಕೊಟ್ಟವಳು ಜೀವನದಲ್ಲಿ ಜೋತೆಯಾಗಲಿಲ್ಲ ಯಾಕೆ?
ರಾಜಶೇಕರಗೌಡ ಹೊತುರ್
Mobile: 7760961477

Sunday, October 10, 2010

ಕಳೆದು ಹೋದವಳ ಕಾಡಿಸುವ ಪ್ರೀತಿ


ಕಳೆದು ಹೋದವಳ ಕಾಡಿಸುವ ಪ್ರೀತಿ

ಆತನೋ ಕನಸುಗಳ ಬೆನ್ನೆರುವ ಹುಂಬ, ನನಸುಗಳ ಮೇಲೆ ಸವಾರಿ ಮಾಡುವ ಕದಂಬ, ಹೆಸರು ದತ್ತು. ಆಕೆಯೋ ಮಾತಿನ ಮಳ್ಳಿ, ನೋಟದಲ್ಲೇ ಹೃದಯ ಕದಿಯೋ ಕಳ್ಳಿ, ಜೀವಂತ ಶಿಲಾ ಬಾಲಿಕೆಗೆ ಇನ್ನೊಂದು ಹೆಸರೇ ಗೌರಿ.

ಅವಲ್ಲೆವೂ ಅವರ ಜೀವನ ಅತ್ಯಮೂಲ್ಯ ಸಂತಸದ ಕ್ಷಣಗಳು, ಅದರಲ್ಲಿ ಏನೋ ಒಂದು ತಾರಾ ಸುಖ ಕಂಡಿದ್ದವು ಆ ಎರಡು ಪ್ರೀತಿಯ ಹೃದಯಗಳು. ಮುಂಗಾರಿನ ತುಂತುರು ಹನಿ ಸುಟ್ಟು ಕರಲಾಗಿದ್ದ ಮಣ್ಣಿಗೆ ಜೀವ ನೀಡಿ ಮುಗ್ಗು ವಾಸನೆ ತರುವ ಇಳಿ ಸಂಜೆ ಸಮಯ. ತಲೆ ಹೋಗೋ ಕೆಲಸ ಇದ್ದರೂ ಎಲ್ಲಿತ್ತೋ ಅಲ್ಲಿಗೆ ಬಿಟ್ಟು ಚಿರತೆಯಂತೆ ಓಡಿ ಬರುತ್ತಿದ್ದ ಅವನು, rank ಹೇಗೆ ಬರೋದು ಅಂತ ಹೇಳಿಕೊಡೋ ಕ್ಲಾಸ್ ನಡಿತಿದ್ದರೂ ಅದನ್ನೇ ತಪ್ಪಿಸಿ ಜಿಂಕೆಯಂತೆ ಎಗರಿ ಎಗರಿ ಬರುತ್ತಿದ್ದ ಅವಳು. ಅವರಿಬ್ಬರ ಸಂಗಮವನ್ನೇ ಕಾಯುತಿದ್ದ ಜಿನಿ ಜಿನಿ ಹನಿಯಿಂದ ಸುರುವಾಗಿ ದೋ ಎಂದು ಸುರಿವುಯ ಆ ಮಳೆ. ಅವನ ಬಾಹುವನ್ನು ಗೌರಿ ತನ್ನೆದೆಗೆ ಗಟ್ಟಿಯಾಗಿ ತಬ್ಬಿಕೊಂಡು ಮಳೆಯನಿಯಲ್ಲಿ ನೆನೆಯುತ್ತ ಹೆಜ್ಜೆಯ ಜೊತೆ ಹೆಜ್ಜೆ ಹಾಕ್ತ ಇದ್ರೆ ಇಡೀ ರಸ್ತೆಯ ಜನ ಅವರನ್ನು ಇವರೇನು ಹುಚ್ಚರೋ ಎಂದು ಒಂದು ಕ್ಷಣ ಬೆಕ್ಕಸ ಬೆರಗಾಗಿ ನೋಡ್ತಾ ಇರ್ತಿದ್ದರು. ಹಾಲು ಕೆನೆಯಷ್ಟು ಮೃದುವಾದ ಅವಳ ಹಣೆಯಿಂದ ಜಾರಿ ಸಂಪಿಗೆಯ ಆ ಮೂಗನ್ನು ಬಳಸಿ, ಬಿಲ್ಲಿನಾಕಾರದ ಕೆಂಪು ತುಟಿಗಳಿಗೆ ಮುತ್ತಿಟ್ಟು ಉಬ್ಬಿದ ಗಲ್ಲದಿಂದ ಬಿಳುತಿದ್ದ ಪ್ರತಿ ಹನಿಯನ್ನು ಬೊಗಸೆಯಲ್ಲಿಡಿದು ಅಮ್ರುಥದಂತೆ ಕುಡಿತಾ ಇದ್ದ ದತ್ತು. ಚಂದ್ರಪ್ಪನ ಇಸ್ ಕ್ರೀಮ್ ಅಂಗಡಿಯಲ್ಲಿ ಕೋನ್ ಇಸ್ ತಗೊಂಡು ಮೆಚ್ಚಿನ ಗಾಂದಿ ಗಾರ್ಡನ್ ನ ಮೂಲೆಯ ಆಲದ ಮರದ ಕೆಳಗೆ ತೊಯ್ದ ಕಲ್ಲು ಬೆಂಚಿನ ಮೇಲೆ ಕುಲಿತುಕೊಳ್ಳುತ್ತಿದ್ದಳು ಅವಳು, ಅವಳ ಮಡಿಲಲ್ಲಿ ಮಗುವಂತೆ ಮಲಗಿ ಒಮ್ಮೆ ಎಲೆಯಿಂದ ಬೀಳುತಿದ್ದ ಹನಿಗೆ ಇನ್ನೊಮ್ಮೆ ಅವಳ ಕೋನ್ ಐಸ್ ಕ್ರೀಮ್ ಗೆ ಬಾಯಿವೊಡ್ದುತಿದ್ದ ಅವನು. ಅವಳೆಷ್ಟೇ ಸಿಮಿಡಿಗೊಂಡು ಸಿಟ್ತಾಗ್ತಾ ಇದ್ದರೂ ಅವಳ ಐಸ್ ಕಿತ್ತಿಕೊಂಡು ತಿನ್ನ್ನೋದರಲ್ಲಿ ಇರೋ ಮಜಾ ಮತ್ತೆಲ್ಲಿ ಕಾಣಲು ಸದ್ಯವೇ ಇರಲ್ಲಿಲ್ಲ ಅವನಿಗೆ. ಮಳೆ ನಿಂತು ಬೀಸುತಿದ್ದ ತಣ್ಣನೆಯ ಗಾಳಿಗೆ ಸಣ್ಣಗೆ ಚಳಿಯಾಗಿ ಅವಳನ್ನೊಮ್ಮೆ ಗಟ್ಟಿಯಾಗಿ ತಬ್ಬ್ಬಿಕೊಂಡು ಮಲಗಿದರೆ ಸಮಯ ಹೋಗಿ ರಾತ್ರಿಯಗೊದೆ ಗೊತ್ತಾಗ್ತಾ ಇರಲಿಲ್ಲ. ಒಂಬತ್ತು ಗಂಟೆಯಲ್ಲಿ ನಿಶಾಚರಿಗಳಂತೆ ಸಿಕ್ಕ ಸಿಕ್ಕ ಓಣಿ ರಸ್ತೆಗಳಲ್ಲಿ ಸುತ್ತಿ, ಸಾಕಾಗಿ ಕೊನೆಗೆ ಅವಳನ್ನು ಅವಳ ಮನೆಗೆ ಮುಟ್ಟಿಸಿ ಇನ್ನೇನು ತನ್ನ ದಾರಿ ಹಿಡಿಯಬೇಕು ಅನೋಷ್ಟರಲ್ಲಿ ಗೌರಿ ತನ್ನ ನಾಲಿಗೆಯ ಚೂಪನ್ನು ಮುಂದೆ ಮಾಡಿ ಮೂಗು ಮುರಿದು ಅಣಕಿಸಿ ಟಾಟಾ ಹೇಳಿ ಮನೆಯೊಳಕ್ಕೆ ಓಡಿದಾಗ ಅವನ ಎದೆಗೆ ಒಮ್ಮೆ ಆಕೆಯ ತುಟಿಗಳಿಂದ ಮುತ್ತಿಕ್ಕಿದಂತ ಜುಮ್ಮೆನ್ನುವ ಅನುಭವ ಹೇಗೆ ಮರಿಯೋಕೆ ಸಾದ್ಯ.
ಬೆಳಿಗ್ಗೆ ಗೋಡೆಯ ಮೇಲಿನ ಗಡಿಯಾರ ಆರು ಮುಟ್ಟೋದಕ್ಕೂ ಮೊದಲೇ ಅವಳ ಕಾಲ್ ಅವನ ಮೊಬೈಲ್ಗೆ. ಅರೆ ತೆರೆದ ನಿದ್ದೆಗಣ್ಣಲ್ಲೇ ಸೆಲ್ ಎತ್ತಿ ಕಿವಿಗಿಟ್ಟುಕೊಂಡರೆ ಕೆಲಿಸುತಿದ್ದುದು ಅವಳ ಮಧುರ ಕಂಠ ಅಲ್ಲ ಬರೀ ಸೀನುಗಳ ಮೇಲೆ ಸೀನು. ಶೀತ ಆಗಿ ಅವಳ ಮೂಗು ಕಟ್ಟಿ, ಪ್ರತಿ ಬಾರಿ ಮೂಗೆರಿಸುತಾ ಗುಡ್ ಮಾರ್ನಿಂಗ್ ಹೇಳ್ತಾ ಇದ್ದರೆ ದತ್ತುಗೆ ಒಳಗೊಳಗೇ ನಗು ಬರ್ತಾ ಇತ್ತು.
ದೇವರು ಎಷ್ಟು ಒಳ್ಳೆಯವೊನೋ ಅಷ್ಟೇ ಕ್ರೂರಿಯೂ ಹೌದು. ಅವನಿಗೆ ಒಂದು ಭಯ, ಎಲ್ಲರೂ ಸುಖವಾಗಿದ್ದರೆ ತನ್ನನ್ನೆಲ್ಲಿ ಮರೆತು ಬಿಡ್ತಾರೋ ಅನ್ನೋ ಸಂಕಟ,ಅದಕ್ಕೆ ಯಾರನ್ನು ಸಂತೋಷವಾಗಿ ಜೀವಿಸಲು ಬಿಡೋದೇ ಇಲ್ಲ. ಅದೊಂದು ಮಟ ಮಟ ಮಧ್ಯಾನ್ಹ ಕಾಲೇಜ್ ಮುಗಿಸಿ ತನ್ನ ಮುದ್ದಾದ ಪೆಪ್ಟಿ ಬೈಕಲ್ಲಿ ಗಾಳಿಯಲ್ಲಿ ತೇಲುತ್ತ ಹೋಗುತಿದ್ದಳು ಗೌರಿ.ಬಿಳಿಯ ಚೋದಿದಾರದಲ್ಲಿ ಮುತ್ತಿನಂತೆ ಕಂಗೊಳಿಸುತಿದ್ದ ಸುಂದರಿ, ಕುತ್ತಿಗೆಗೆ ಸುತ್ತಿದ್ದ ತುಪ್ಪಟ ಹಾಗೆ ಹರಡ್ತಾ ಇತ್ತು. ವಿಧಿ ಲಿಕಿತ ಯಾರು ತಾನೆ ಬಲ್ಲರು. ಹಿಂದಿನಿಂದ ಬಂದ ಟ್ರುಕ್ ನ ಕೊಂಡಿಗೆ ದುಪ್ಪಟ್ಟ ಸಿಕ್ಕಿ ಎಳೆದೆ ಬಿಡ್ತು. ಏನಾಗುತಿದೆ ಅನ್ನೋಷ್ಟರಲ್ಲಿ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದು ರಕ್ತದ ಮಡುವಿನಲ್ಲಿ ಹೆಣವಾಗಿ. ಕನಸಲ್ಲೂ ಎಣಿಸಿರಲಿಲ್ಲ ಅವನು, ಆ ಸೀನು, ಅಣುಕು, ಆ ಐಸ್ ಕ್ರೀಮ್ ಕೊನೆಗೆ ಅವಳೇ ದೂರ ಬಹು ದೂರ ಹೋಗ್ತಾಳೆ ಅಂತ. ಆಗೆಲ್ಲ ಮುಂಜಾನೆಯ ಸಿಹಿ ನಿದ್ದೆಯಲ್ಲಿದ್ದಾಗ ಕಾಲ್ ಮಾಡಿ ನಿದ್ದೆಗೆಡಿಸಬೇಡ ಅಂತ ಅವಳನ್ನ ಬೇಡುತಿದ್ದ. ಇವತ್ತು ನಿದ್ದೆಗೆಡಿಸಲು ಅವಳಿಲ್ಲ ಆದರೆ ಏನು ಮಾಡಿದರೂ ಅವಳ ನೆನಪುಗಳು ಮಾಯವಾಗದೆ ಎಸ್ಟೋ ರಾತ್ರಿಗಳು ನಿದ್ದೇನೆ ಇಲ್ಲದೆ ಕಳೆದು ಹೋಗ್ತಾ ಇವೆ. ಯಾರು ಏನೇ ಅದರೂ ಟೈಮ್ ತನ್ನ ನಿಯತ್ತನ್ನು ಮರೆಯೋಲ್ಲ, ಕಾಲಚಕ್ರ ನಿಲ್ಲೋಲ್ಲ. ಮತ್ತೆ ಮುಂಗಾರು ಶುರು ಆಗೋ ಸಮಯ, ಅವಳಿಲ್ಲದೆ ಐಸ್ ಸಪ್ಪೆಯಾಗಿದೆ, ಆಲದ ಮರ ಒಣಗಿ ಹೋಗಿದೆ, ದತ್ತುವಿನ ಜೀವನವೇ ಸತ್ತು ಹೋಗಿದೆ. ಸುರಿಯೋ ಮಳೆಗೆ ಮುಖ ಮಾಡಿ ಒಬ್ಬನೇ ನಿಂತು ಅವಳ ಬರುವಿಕೆಗೆ ಕಾಯ್ತಾ ಇದ್ದಾನೆ ಅವನು. ಮತ್ತೆಂದು ದತ್ತುವನ್ನು ತಿರುಗಿ ನೋಡದಂತ ಮಾಯಾ ಪ್ರಮಂಚದಲ್ಲಿ ಮಾಯವಾಗಿ ಮರೆಯಾದವಳು ಇನ್ನೆಂದು ವಾಪಸು ಬರೋದಿಲ್ಲ ಅಂತ ಗೊತ್ತು ಅವನಿಗೆ, ಆದರೂ ಕಾಯ್ತಾ ಇದ್ದಾನೆ ಯಾಕಂದ್ರೆ, ಕಾಡೋ ಆ ನೆನಪುಗಳ ಕಾಲು ಕಟ್ಟಿ ಹಾಕಲು ಇರೋ ದಾರಿ ಅಂದ್ರೆ ಕಾಯೋದು, ಕಾಯುತ ಕಾಯುತ ತನ್ನನ್ನು ತಾನು ಮರೆಯೋದು, ಅದೇ ಅಲ್ವೇ ಪ್ರೀತಿ.

--ರಾಜಶೇಕರಗೌಡ ಹೋತುರು.
rjgouda@gmail.com
ಬಾಗಲವಾಡ
ರಾಯಚೂರು
7760961477

Thursday, September 30, 2010

ಗೆಳತಿ ಪ್ರೀತಿಸು ನನ್ನ


ಗೆಳತಿ ಪ್ರೀತಿಸು ನನ್ನ

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ನಾನೇನು ಆ ಬೆಳದಿಂಗಳು ಸುರಿಸೋ ಚಂದಿರನನ್ನು
ಹಿಡಿದು ನಿನ್ನ ತಲೆಯಲ್ಲಿ ಕಂಪು ಸೂಸೋ ಮಲ್ಲಿಗೆ ಹೂವಾಗಿಸಿ ಮುಡಿಸಲಾರೆ
ಆದರೆ ನನ್ನ ಜೀವನದ ಕಟ್ಟ ಕಡೆ ಗಳಿಗೆಯವರೆಗೆ ನಿನ್ನ ಪ್ರತಿ ಹೆಜ್ಜೆಗೆ
ಕಮಲದ ದಳಗಳನ್ನು ಹಾಸಿ ಪ್ರೀತಿಸುವೆ.

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ಹರಿಯೋ ಜಲಪಾತವನ್ನು ಹಿಡಿದು ಮಡಿಸಿ ನಿನ್ನ ಬಳುಕುವ
ಬಳ್ಳಿಯಂತ ದೇಹಕ್ಕೆ ಸೀರೆಯಾಗಿಸಿ ಉಡಿಸಲಾರೆ
ಆದರೆ ನನ್ನ ಎದೆಯ ಕೊನೆ ಉಸಿರಿರುವವರೆಗೆ ಕೆನೆಯಷ್ಟು ಮೃದುವಾಗಿರುವ
ನಿನ್ನ ಚರ್ಮಕ್ಕೆ ಹೊಂಗಿರಣವೂ ಚುಚ್ಚಿ ನೋಯಿಸದಂತೆ ಪ್ರೆಮಿಸುವೆ.

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ಮಜ್ನುನಂತೆ ಇತಿಹಾಸ ಬರೆವಷ್ಟು ಪ್ರೀತಿಸಲಾರೆ,
ಶಹಜಾನ್ ನಂತೆ ತಾಜ್ಮಹಲ್ ಕಟ್ಟಿ ಎಷ್ಟು ಪ್ರೀತಿಸುತಿದ್ದೆ ಅಂತ ಜಗತ್ತಿಗೆ ತೋರಿಸಲಾರೆ
ಆದರೆ ನೀನು ಎಂಬತ್ತು ವಯಸ್ಸಿನ ಮುದಿಕಿಯಾಗಿ, ಮುಖವೆಲ್ಲ ಸುಕ್ಕುಗಟ್ಟಿ
ನಡೆಯಲು ಆಸರೆ ಬೇಕು ಅಂದಾಗ ನಿನ್ನನ್ನು ನನ್ನೆದೆಗೆ ಗಟ್ಟಿಯಾಗಿ ಅಪ್ಪಿಕೊಂಡು ಮುನ್ನಡೆಸುವೆ.

ಗೆಳತಿ, ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

--ರಾಜಶೇಕರಗೌಡ ಹೊತುರ್
ಬಾಗಲವಾಡ
rjgouda@gmail.com
7760961477

ನಾನೇ ನೀನು ನೀನೆ ನಾನು



ನಾನೇ ನೀನು ನೀನೆ ನಾನು

ನಿಜ ಹೇಳ್ಲ ಗೌರಿ,
ನಿನ್ನನ್ನೆಂದು ನಾ ಪ್ರಿತಿಸಲೇ ಇಲ್ಲ.
ಹೃದಯ ರಕ್ತ ಎಂದಾದರೂ ಹೇಳಿವೆಯಾ ಒಂದಕ್ಕೊಂದು ಪ್ರೀತಿಸುತ್ತೆವೆಂದು?
ಹಗಲು ರಾತ್ರಿ ಎಂದಾದರೂ ಹೇಳಿವೆಯಾ ಒಂದಕ್ಕೊಂದು ಪ್ರೆಮಿಸುತ್ತೆವೆಂದು?
ಭೂಮಿ ಬಾನು ಎಲ್ಲಿಯಾದರೂ ಬರೆದಿವೆಯಾ ಒಂದಿಲ್ಲದೆ ಏನೂ ಇಲ್ಲ ಎಂದು?
ನಿನ್ನನ್ನೆಂದು ನಾ ಪ್ರಿತಿಸಲೇ ಇಲ್ಲ
ನನ್ಗೊತ್ತಿರೋದು ಒಂದೇ,ಇಲ್ಲಿ ನಾನು ನೀನು ಅನ್ನೋದೇ ಇಲ್ಲ
ಯಾಕಂದ್ರೆ ನಿನ್ನಿಲ್ಲದೆ ನಾನಿಲ್ಲ ಕಣೆ.

ನಿಜ ಹೇಳ್ಲ ಗೌರಿ,
ನಿನ್ನನ್ನೆಂದು ನಾ ಪ್ರೇಮಿಸಲೇ ಇಲ್ಲ.
ಕೆನೆ ಹಾಲಿನಿಂದ ಹುಟ್ಟಿದರೂ ಹೆಲೆಂದಾದರು ಹೇಳಿದೆಯ ನನ್ನಿಂದ ನೀನು ಎಂದು
ಜೇನಹನಿ ಗೂಡಿನಲ್ಲಿ ಬೆಳೆದರೂ ಗೂಡು ಎಂದಾದರು ಕೇಳಿದೆಯ ನನ್ನಿಂದ ನೀನು ಎಂದು
ಬೂದಿ ಬೆಂಕಿಯಿಂದ ಬಂದರು ಬೆಂಕಿ ಎಲ್ಲಾದರೂ ಬೆರಳು ಮಾಡಿ ತೋರಿಸಿದೆಯ ನಾನಿಲ್ಲದೆ ನೀನಿಲ್ಲ ಎಂದು
ನಿನ್ನನ್ನೆಂದು ನಾ ಪ್ರೇಮಿಸಲೇ ಇಲ್ಲ
ನನ್ಗೊತ್ತಿರೋದು ಒಂದೇ,ಇಲ್ಲಿ ನೀನು ಬರುಕಿರುವದಕ್ಕೆ ನನ್ನ ಬದುಕಿದೆ.
ಯಾಕಂದ್ರೆ ನಿನ್ನಿಲ್ಲದೆ ನಾನಿಲ್ಲ ಕಣೆ.

--ರಾಜಶೇಕರಗೌಡ ಹೊತುರ್
ಬಾಗಲವಾಡ
rjgouda@gmail.com
7760961477

Sunday, September 19, 2010

ಆ ಕೆಂಪು ಮೂಗು

ಹೇ ಮುದ್ದು ಕೋತಿ,

ಹೇಗಿದ್ದೀಯ? ಇನ್ನೂ ನಿನ್ನ ಮೂಗು ಕೆಂಪಗೆ ಇದೆಯಾ? ಅಥವಾ ಜ್ವರ ಕಡಿಮೆ ಆಗಿ ಬಿಳಿಯಾಗಿದೆಯಾ?
ನಿಜ ಹೇಳಲಾ ಚಿನ್ನ, ಕಳೆದ ಮೂರು ದಿನದಿಂದ ನಾನು ನಾನಗೆ ಇಲ್ಲ, ಸರಿಯಾದ ಸಮಯಕ್ಕೆ ಊಟ, ನೀಟಾಗಿ ತೊಳೆದ ಬಟ್ಟೆ, ಇನ್ ಟೈಮ್ ನಲ್ಲಿ ಆಫೀಸ್ ನಲ್ಲಿ ಇರೋ ಶಿಸ್ತಿನ ಶಿಪಾಯಿ ಅಂತ ಕರಿತಿದ್ದೆಯಲ್ಲ ನೀ ನನ್ನ, ಈಗ ನನ್ನ ಸ್ಥಿತಿ ನೋಡಿದರೆ ನೀನು ಎದೆ ಒಡೆದು ಸತ್ತೆ ಹೋಗ್ತೀ ಏನೋ. ಯಾಕೋ ಗೊತ್ತಿಲ್ಲ ಕಣೆ ನೀನು ನಿಂಗೆ ಜ್ವರ ಬಂದಿದೆ ಅಂತ ಮೆಸೇಜ್ ಮಾಡಿದಾಗಿನಿಂದ ನಿನ್ನ ಬಿಟ್ಟು ಬೇರೆ ಏನೂ ಯೋಚೆನೆ ಮಾಡೋಕೆ ಆಗ್ತಾ ಇಲ್ಲ. ನಿಂಗೊತ್ತಾ ನಾನು ನನ್ನ ವಿದೇಶಿ ಸಹೋದ್ದೋಗಿಗಳ ಜೊತೆ ಪ್ರಾಜೆಕ್ಟ್ ಬಗ್ಗೆ ಚರ್ಚೆ ಮಾಡ್ತಾ ಇದ್ದಾಗ ನಿನ್ನ ಮೆಸೇಜ್ ಬಂತು, ಒಂದು ಕ್ಷಣ ಬೆವತು ಹೋಗಿ ಏನೂ ಮಾಡಬೇಕು ಅಂತ ತೋಚದೆ ಆ ಮೀಟಿಂಗ್ ಅರ್ಧದಲ್ಲೇ ಬಿಟ್ಟು ಹೊರನಡೆದೆ. ಅದರಿಂದಾಗಿ ಒಂದು ಲಕ್ಷ ಡಾಲರ್ ಕಿಮ್ಮತ್ತಿನ ಪ್ರಾಜೆಕ್ಟ್ ನಮ್ಮ ಕಂಪನಿಯ ಕೈ ಬಿಟ್ಟು ಹೋಯ್ತು, ಮ್ಯಾನೆಜೆರ್ ನನ್ನ ಬೇರೆ ಡಿಪಾರ್ಟ್ಮೆಂಟ್ ಗೆ ವರ್ಗ ಮಾಡಿದ್ದಾನೆ, ಚಿಂತೆ ಇಲ್ಲ ಚಿನ್ನ ನಿನ್ನ ಮುಂದೆ ಈ ಪ್ರಾಜೆಕ್ಟ, ಆ ಕೆಲಸ ಏನು ದೊಡ್ದದಲ್ಲ ಬಿಡು.
ಒಂದಂತೂ ಸತ್ಯ ಕಣೆ, ಮೀಟಿಂಗ್ ಅರ್ಧದಲ್ಲೇ ಬಿಟ್ಟು ನಿನ್ನ ರೂಮಿಗೆ ಬರುವಷ್ಟರಲ್ಲ್ಲಿ ಸಂಜೆ ಸೂರ್ಯ ಮುಳುಗಿ ಗಂಟೆ ಎಂಟಾಗಿತ್ತು. ನೀನು ಆಗಲೇ ಗುಳಿಗೆ, ಟಾನಿಕ್, ಜಂಡೂಭಾಂ ಜೊತೆ ಮಲಗಿದ್ದೆ. ನಿನ್ನ ಹಣೆಗೆ ಕೈಯಿಟ್ಟರೆ ಕೆಂಡದಂತ ಬಿಸಿ, ಗಡ ಗಡ ನಡುಗಿ ನೀ ಮಲಗಿದ ಮಂಚದ ಮೇಲೆ ಕುಳಿತು ನಿನ್ನ ಒಮ್ಮೆ ಗಟ್ಟಿಯಾಗಿ ಎದೆಗಪ್ಪಿಕೊಂಡೆ, ಹೆನ್ನಪ್ಪಿಯಂತೆ ಗಳ ಗಳ ಅಂತ ಅಳಲಿಲ್ಲವದರೂ ನಂಗೆ ಗೊತ್ತಿಲ್ಲದೇ ನನ್ನ ಕಣ್ಣಿಂದ ಎರಡು ಹನಿ ಉದುರಿತ್ತು, ರಾತ್ರಿ ಪೂರ ನಿನ್ನ ತಲೆ ನೀವುತ್ತ, ತಣ್ಣೀರು ಬಟ್ಟೆ ಹಾಕುತ್ತ, ನನ್ನ ಎದೆಮೇಲೆ ಮಲಗಿಸಿಕೊಂಡು ಮುಂಜಾನೆವರೆಗೆ ನಿನ್ನ ಎಚ್ಚರಕ್ಕೊಸರ ಕಾಯುತ್ತ ಇದ್ದೆ. ನೀನು ಎದ್ದು ನನ್ನ ಎದೆಯ ಶರ್ಟ್ ಗುಂಡಿನನ್ನಿ ಸಿಕ್ಕಿ ಹಾಕಿಕೊಂಡಿದ್ದ ನಿನ್ನ ಉದ್ದದ ಕೊದಲ್ಲನ್ನು ಬಿಡಿಸಿಕೊಂಡು ಮೆಲ್ಲನೆ ನಗುತ್ತ ನನ್ನ ಕೆನ್ನೆ ಚೂಟಿದಾಗಲೇ ನಾ ಈ ಜಗತ್ತಿಗೆ ಬಂದಿದ್ದು, ರಾತ್ರಿ ಊಟ ಮಾಡದೇ ನಿದ್ದೆ ಇಲ್ಲದ ನಿನ್ನ ಪಕ್ಕದಲ್ಲೇ ಮಲಗಿದ್ದೆ ಅಂತ ಗೊತ್ತಾಗಿದ್ದು. ನಿನ್ನ ಮುಖ ಮೊದಲಿನ ತರಾ ಕಿಲ ಕಿಲ ಅಂತ ಇರ್ಲಿಲ್ಲ ಆದರೋ ಆ ಸಣ್ಣ ನಗು ನೋಡಿ ಸಣ್ಣಗೆ ಸಮಾದಾನ ಆಯ್ತು. ಪ್ರೀತಿಸಿದವಳನ್ನು ರಾತ್ರಿ ಪೂರ್ತಿ ಎದೆ ಮೇಲೆ ಮಲಗಿಸಿಕೊಂಡು ಹಾರೈಕೆ ಮಾಡಿದ ಆ ಅನುಭವ ಏನೋ ಒಂದು ತರಾ ಕುಶಿ ಕೊಡ್ತಾ ಇತ್ತು, ಹಾಗೆ ನಂಗೂಸ್ಕರ ಒಂದು ಜೀವ ಇದೆ ಅಂತ ನನ್ನೊಳಗೆ ನಾನೇ ಬೆನ್ನು ತಟ್ಟಿಕೊಳ್ಳುತ್ತ ಇನ್ನು ಮುಂದೆ ಜೀವನದಲ್ಲಿ ಜವಬ್ದಾರಿಯಿಂದ ನಡೀಬೇಕು ಅಂತ ಅನ್ನುಸೋಕೆ ಸುರುವಾಯ್ತು. ಅದೇನೋ ಗೊತ್ತಿಲ್ಲ ಕಣೆ ಹಿಂದೆಲ್ಲ ಈ ಗುಳಿಗೆ, ಟಾನಿಕ್, ಜಂಡೂಭಾಂ ವಾಸನೆ ಕಂಡರೆ ವಾಕರಿಕೆ ಬರ್ತಾ ಇತ್ತು , ಅಜ್ಜಿ ತನ್ನ ಕಾಲಿಗೆ ಜಂಡೂಭಾಂ ಅಚ್ಚಿಕೊಂಡು ಕೊತಿದ್ದರೆ ಅವಳ ಹತ್ತಿರ ಕೂಡ ಹೋಗ್ತಾ ಇರ್ಲಿಲ್ಲ, ಆದ್ರೆ ನಿನ್ನ ತಲೆಗೆ ನಾನೇ ಜಂಡೂಭಾಂ ಹಚ್ಚಿ ಎದೆಮೇಲೆ ಮಲಗಿಸಿಕೊಂದೊದ್ದರೂ ನಂಗೆ ಏನೂ ಅನ್ನಿಸಲೇ ಇಲ್ಲ. ನೆನೆಸಿಕೊಂಡರೆ ನಂಗೆ ನಗು ಬರ್ತಾ ಇದೆ ಪ್ರೀತಿಯಂದರೆ ಇದೇನಾ ಅಂತ. ಅಲ್ಲಿವರೆಗೆ ಟೆನ್ಶನ್ನಲ್ಲಿ ಇದ್ದ ನಂಗೆ ಒಮ್ಮ್ಲೆಗೆ ಹೊಟ್ಟೆ ಹುನ್ನಗುವಸ್ಟು ನಗು ಬಂದಿದ್ದು ನಿನ್ನ ಆ ಕೆಂಪು ಮೂಗು ನೋಡಿ. ನಿಂಗೆ ಜ್ವರ ಬಂದಾಗ, ನೆಗಡಿ ಆದಗ ಮೂಗು ಕೆಂಪಗೆ ಆಗುತ್ತಲ್ಲ, ಅದು ನಿಂಗೆ ಮುಜುಗರ ತಂದರೂ ನಂಗೆ ನೀ ಸುಂದರವಾಗೇ ಕಾಣುತ್ತೀಯ ಕಣೆ.
ಅಲ್ಲಿವರೆಗೋ ಇದ್ದ ಆ ಸಮಾದಾನ, ನಗು, ಆ ಫೀಲಿಂಗ್ ಒಮ್ಮೆಗೆ ಚೂರು ಚೂರು ಆಗಿದ್ದು ನಿನ್ನ ತಂದೆ ನಿನ್ನನ್ನು ಊರಿಗೆ ಕರೆದುಕೊಂಡು ಹೋಗಲು ಬಂದಾಗ. ವಲ್ಲದ ಮನಸ್ಸಿಂದ ನೀನು ಹೊರಡಲು ನಿಂತಿದ್ದೆ, ಇಲ್ಲದ ಮನಸ್ಸಿಂದ ಕಳಿಸಲು ನಾನು ಕುಳಿತಿದ್ದೆ. ಇವತ್ತಿಗೆ ನೀನು ನಿನ್ನೂರು ಸೇರಿ ಒಂದು ವಾರ ಕಳೆಯಿತು ಚಿನ್ನ, ಒಂದು ಕಾಲ್ ಇಲ, ಮೆಸೇಜ್ ಇಲ್ಲ, ನೀನಿಲ್ಲದೆ ನಿನ್ನ ನೆನಪಿನ ಜೊತೆ ಜೋಕಾಲಿ ಆಡಿ ಸಾಕಾಯ್ತು ಕಣೆ. ಬೇಗ ಬಾ, ಕಡೆ ಪಕ್ಷ ಕಾಲ್ ಮಾಡು, ನಿನ್ನ ಮೂಗು ಹೇಗಿದೆ ಅಂತ ತಿಳಿಸು. ನಿನಗೋಸ್ಕರ ಕಾದಿರುವ ನಿನ್ನ ಹುಡುಗ.


-Rajashekara Gouda
rjgouda@gmail.com
7760961477

Sunday, September 5, 2010

ಪ್ರೀತಿಯ ಕರೆ

ನಿನ್ನ ಕರೆದಷ್ಟು ಬಾರಿ ಆ ದೇವರನ್ನೂ ಕರೆದಿಲ್ಲ
ಗೆಳತಿ, ನೀ ದೇವರಿಗಿಂತ ದೊಡ್ಡವಳಾ? ಅದು ನನಗೆ ಗೊತ್ತಿಲ್ಲ.

ನಿನ್ನ ನೆನೆದಷ್ಟು ಬಾರಿ ನನ್ನ ನಾನೇ ನೆನೆದಿಲ್ಲ
ಗೆಳತಿ, ನೀನಿಲ್ಲದೆ ನಾನಿಲ್ಲ, ಅದು ನಿನಗೆ ಗೊತ್ತಿಲ್ಲ.

ನಿನ್ನೊಂದಿಗಿನ ನನ್ನ ಒಡನಾಟ ನಿನಗೆ ಬರಿ ಸಲುಗೆ
ನನಗದು ನೀ ಸಿಕ್ಕರೆ ಒಲವು, ಗೆಲುವು, ಇಲ್ಲದಿದ್ದರೆ ಅದು ಸುಲಿಗೆ.

ಒಮ್ಮೊಮ್ಮೆ ಅನಿಸುತಿದೆ ಬಿಕ್ಕಿ ಬಿಕ್ಕಿ ಅತ್ತು ಬಿಡಲೇ ಎಂದು
ಕಣ್ಣ ಕೆರೆಯ ನೀರೆಲ್ಲ ಬತ್ತಿದೆ, ಕಣ್ಣೀರು ಕೂಡ ಬರದಿಂದು.

ನೀ ಬರುವ ಬಾಗಿಲುಗಳೆಲ್ಲ ಮುಚ್ಚಿ ಮುಳುಗಿವೆ
ಆದರೂ ಕಾಯುತಿರಿವೆ ನೀ ಬರುವೆ ಎಂದು.

ಬಂದು ಬಿಡು ಗೆಳತಿ ಎಲ್ಲ ಬಂಧಗಳ ಬಿಟ್ಟು
ನೀನಿಲ್ಲದೆ ದಿನವೂ ಸಾಯಿತಿರುವೆ, ಉಳಿಸು ನನ್ನ ದಯವಿಟ್ಟು.

ನಿನ್ನ ನೆನೆದಷ್ಟು ಬಾರಿ ನನ್ನ ನಾನೇ ನೆನೆದಿಲ್ಲ
ಗೆಳತಿ, ನೀನಿಲ್ಲದೆ ನಾನಿಲ್ಲ, ಅದು ನಿನಗೆ ಗೊತ್ತಿಲ್ಲ.

ನಿನ್ನ ಕರೆದಷ್ಟು ಬಾರಿ ಆ ದೇವರನ್ನೂ ಕರೆದಿಲ್ಲ
ಗೆಳತಿ, ನೀ ದೇವರಿಗಿಂತ ದೊಡ್ಡವಳಾ? ಅದು ನನಗೆ ಗೊತ್ತಿಲ್ಲ.

-Rajashekar Gouda Hotur
rjgouda@gmail.com