ಬೇಡ ಕಣೋ ಈ ಪ್ರೀತಿ ಪುರಾಣ
ನನ್ ನಿಮ್ಮಂತ ಮುಗ್ದ ಹುಡುಗರಿಗೆ
ಸಾವೇ ಇಲ್ಲದ ಸುಡುಗಾಡು ಪ್ರಯಾಣ
ಕಣ್ಣು ಹೊಡಿತಾರೆ, ಮುಸಿ ಮುಸಿ ಸ್ಮೈಲ್ ಮಾಡ್ತಾರೆ
ಮುದ್ದು ಮುದ್ದು ಮಾತಿನಿಂದ ಮರಳು ಮಾಡ್ತಾರೆ .
ಶಾಪಿಂಗ್ ಅಂತ ಸಿಕ್ಕ ಸಿಕ್ಕ ಮಾಲ್ ಗೆ ನುಗ್ತಾರೆ
ಸಂಜೆ ರಾತ್ರಿ ಆಗೋ ವರೆಗೆ ಜೊತೆಗೆ ತಿರುಗು ಅಂತಾರೆ
ಕಾಲೇಜ್ ಗೆ ಹೋಗುವಾಗ ಡ್ರಾಪ್ ನಾವೇ ಕೊಡಬೇಕು
ಅವರ ಕುಸಿಗೊಸ್ಕರ ನಮ್ಮ ಕೆಲಸಕ್ಕೆ ಗೋಲಿ ಹೊಡಿಬೇಕು
ಪ್ರೀತಿಗಾಗಿ ಪ್ರಾಣ ಕೊಡುವ ಹುಚ್ಚರು ನಾವು
ಇಂತ ಚಿಕ್ಕ ಪುಟ್ಟ ಲೆಕ್ಕವಿಡುವದು ಮೆಚ್ಚಲಾರೆವು
ಇಷ್ಟ ಪಟ್ಟ ಹುಡಿಗಿಗೆ ಕಷ್ಟ ಪಟ್ಟು ಪ್ರೀತಿ ನಿವೇದನೆ ಮಾಡಿದರೆ
ನಿನ್ನನ್ನು ಹಾಗೆ ನೋಡೇ ಇಲ್ಲ ಅಂತ ಟಾ ಟಾ ಹೇಳ್ತಾರೆ ನಮಗೆ ಚೂರಿ ಹಾಕ್ತಾರೆ
ನಮ್ಮಂತ ಹುಡುಗರೆಲ್ಲ ಹುಡಿಗೀರಿಗೆ ಟಿವಿ ಚಾನಲ್ ತರಾ
ಮನಸ್ಸಿಗೆ ಬಂದಂಗೆ ಮುಲಾಜಿಲ್ಲದೆ ಚೇಂಜ್ ಮಾಡ್ತಾರೆ
ಬೇಡ ಕಣೋ ಈ ಪ್ರೀತಿ ಪುರಾಣ
ನನ್ ನಿಮ್ಮಂತ ಮುಗ್ದ ಹುಡುಗರಿಗೆ
ಸಾವೇ ಇಲ್ಲದ ಸುಡುಗಾಡು ಪ್ರಯಾಣ
-ರಾಜಶೇಕರಗೌಡ ಹೊತುರ್
ರಾಯಚೂರು
rjgouda@gmail.com
No comments:
Post a Comment