ಅದೊಂದು ಪುಟ್ಟ ಸಂಸಾರ ಗಂಡ, ಹೆಂಡತಿ ಮತ್ತು ಮಗು. ಇರುವ ಎರಡು ಎಕರೆ ಭೂಮಿಯಲ್ಲಿ ಹಗಲು ಸುಡು ಬಿಸಿಲಿನಲ್ಲಿ ದೇಹ ಕರಕಲಾಗಿಸಿ ದುಡಿದು ಅವತ್ತಿನ ಹಿಟ್ಟು ತರುವ ಗಂಡ, ತಂದ ಹಿಟ್ಟನ್ನೇ ಪ್ರೀತಿಯಿಂದ ಅಡುಗೆ ಮಾಡಿ ತನ್ನ ಒಡಲು ಪೂರ್ತಿ ತುಂಬದಿದ್ದರೂ ಮಗನ ಹೊಟ್ಟೆಗೆ ಹಾಕಿ ಅವನ ಭವಿಷ್ಯದ ಬಗ್ಗೆ ಕನಸು ಕಟ್ಟಿ, ಇಂದಲ್ಲ ನಾಳೆ ತನ್ನ ಮಗ ದೊಡ್ಡವನಾಗಿ ಚೆನ್ನಾಗಿ ಓದಿ ಈ ಧರಿದ್ರ ಜೀವನದಿಂದ ಮುಕ್ತಿ ದೊರೆಕಿಸುವಂತೆ ಮಾಡು ಎಂದು ಮೂರೊತ್ತು ದೇವರಿಗೆ ಕೈ ಮುಗಿವುವ ತಾಯಿ. ಇಷ್ಟ ಇಲ್ಲದಿದ್ದರೂ ವಿಧಿ ಇಲ್ಲದೆ ತೊಟ್ಟ ಒಂದು ಜೊತೆ ಬಟ್ಟೆಯಲ್ಲಿ ಶಾಲೆಗೇ ಹೋಗಿ, ಗೆಳೆಯರ ಜೊತೆ ದಿನವೂ ಮೂದಲಿಸಿಕೊಂಡು ಬರುವ ಮಗ. ಇಂತ ಸಂಧರ್ಭದಲ್ಲಿ ಯಾವುದೋ ಸರ್ಕಾರ ಇನ್ನಾವುದೋ ಪಾಲಿಸಿ ತಂದು, ಎಲ್ಲೋ ಇರುವವರನ್ನು ಉದ್ಧಾರ ಮಾಡಲು ಹೋಗಿ ಇರವ ಎರಡು ಎಕರೆ ಭೂಮಿಯನ್ನು ಈ ರೈತನಿಂದ ಕಿತ್ತಿಕೊಂಡು ಬಿಟ್ಟರೆ ಏನು ಗತಿ?. ಸರ್ಕಾರ ಕೊಡುವ ಪರಿಹಾರ ಧನ ಒಂದೆರಡು ವರ್ಷ ಸುಖವಾಗಿ ಇಡಲು ಸಾಕಾದೀತು, ಆದರೆ ಜೀವನ ಕಟ್ಟಿ ಕೊಟ್ಟಿದ್ದ ಭೂಮಿಯನ್ನು ಮರಳಿ ಪಡೆಯಲು ಸಾದ್ಯವೆ? ಜೀವನವೇ ಕಮರಿದ ಮೇಲೆ ಜೀವಿಸಲು ಸಾದ್ಯವೆ? ಪರಿಣಾಮ ಆ ರೈತ ಇದ್ದು ಸತ್ತಂತೆ ಜೀವಿಸುವದಕಿಂತ ಸಾಯುದೆ ಮೇಲೆಂದು ನಿರ್ಧರಿಸಿ, ಇನ್ನೂ ಜಗತ್ತನ್ನೇ ಸರಿಯಾದ ಅರಿಯದ ಮಗು ಬೇಡ ಬೇಡ ಅಂತ ಕೈ ಮುಗಿದು ಪರಿ ಪರಿ ಅಂಗಲಾಚುತಿದ್ದರೂ ಬೇರೆ ದಾರಿ ಕಾಣದೆ ಅವನು ತಿನ್ನುವ ಅನ್ನಕ್ಕೆ ವಿಷಯಿಟ್ಟು, ಜೀವ ಕೊಟ್ಟ ಮಗನಿಗೆ ಜೀವನ ಕೊಡದೆ ಕಣ್ಣ ಮುಂದೆ ಸಾಯಿಸಿದ ನೋವು ಕಣ್ಣೀರಾಗಿ ಕಪಾಳದ ಮೇಲೆ ಬರುತ್ತಿರುವಾಗಲೇ ಹೆಂಡತಿಗೆ ಒಂದು ಹಗ್ಗ ಕೊಟ್ಟು ತಾನು ನೇಣು ಬಿಗಿದು ಕೊಂಡು ಇಹ ಲೋಕ ತ್ಯಜಿಸುತ್ತಾನೆ. ಇದು ಒಂದು ಸಣ್ಣ ಘಟನೆ ಮಾತ್ರ ಆದರೆ ಇವತ್ತು ಕೈಗಾರಿಕೆಯ ಹೆಸರಲ್ಲಿ ಸರಕಾರ ಒಕ್ಕಲೆಬ್ಬಿಸಿದ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂತ ಸಾವಿರ ಸಾವಿರ ದೃಶ್ಯ ಕಂಡು ಬರುತ್ತವೆ.
ಒಂದು ರಾಜ್ಯ, ಒಂದು ದೇಶ ಅಭಿವೃದ್ಧಿ ಹೊಂದಿ ವಿಶ್ವದ ಭೂ ಪಟದಲ್ಲಿ ತನ್ನ ಸ್ಥಾನ ಗುರುತಿಸಿಕೊಳ್ಳಲು ಕೈಗಾರಿಕೆಗಳ ಸ್ತಾಪನೆ ಅಗತ್ತ್ಯ. ಬರಿ ಅಭಿವೃದ್ಧಿ ಅಷ್ಟೇ ಅಲ್ಲ ಆ ದೇಶದ ಜನರಿಗೆ ಕೈ ತುಂಬ ಕೆಲಸ ಕೊಟ್ಟು, ಅವರ ಜೀವನ ಸುಖಕರವಾಗಿಸಲೂ ಕೈಗಾರಿಕೆ ಅತ್ತ್ಯಗತ್ತ್ಯ. ಇಂತ ಒಂದು ಪ್ರಯತ್ನ ನಮ್ಮ ಕರ್ನಾಟಕ ಸರಕಾರದಿಂದ 'ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ' ದ ಹೆಸರಲ್ಲಿ ಜೂನ್ 3 ಮತ್ತು 4 ರಂದು ಬೆಂಗಳೂರಿಲ್ಲಿ ನಡೆದದ್ದು ಶ್ಲಾಘನೀಯ.
ವಿಶ್ವದ ಎಲ್ಲ ಹೂಡಿಕೆದಾರರು ಇದರಲ್ಲಿ ಬಾಗವಸದೆ ಇದ್ದರೂ ದೇಶದ ಮತ್ತು ವಿದೇಶದ ಕೆಲವು ಪ್ರಮುಖ ಬಂಡವಾಳ ಹೂಡಿಕೆದಾರರನ್ನು ಒಂದೇ ಸೂರಿನಡಿ ತಂದು ಸುಮಾರು ನಾಲ್ಕು ಲಕ್ಷ ಕೋಟಿಯ ರುಪಾಯಿಯ ವಹಿವಾಟಿಗೆ ಕರ್ನಾಟಕದಲ್ಲಿ ವೇದಿಕೆ ಸಜ್ಜುಗೊಳಿಸಲು ನಾಂದಿ ಹಾಡಿರುವದು ಸಂತೋಷ ಹಾಗು ಮೆಚ್ಚತಕ್ಕ ವಿಷಯವೇ. ಬಾಗವಹಿಸಿ, ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡುವದಾಗಿ ಬರವಸೆ ಕೊಟ್ಟಿರುವವರೆಲ್ಲ ಕೈಗಾರಿಕೆ ಸ್ತಾಪನೆ ಮಾಡುತ್ತಾರೋ ಇಲ್ಲವೋ ಆದರೆ ಆ ದಿಶೆಯಲ್ಲಿ ಪ್ರಯತ್ನ ಸಾಗಿರುವದು ಒಂದು ಹೆಮ್ಮೆಯ ವಿಷವೆಯೇ.
ಸೂಕ್ಹ್ಮವಾಗಿ ಗಮನಿಸಿದರೆ ಈ ಸಾರಿಯ ಸಮಾವೇಶದಲ್ಲಿ ಆಗಿರುವ 4 ಲಕ್ಷ ಕೋಟಿ ರುಪಾಯಿ ಒಡಂಬಡಿಕೆಯಲ್ಲಿ ಅರ್ದಕಿಂತ ಹೆಚ್ಚು ಅಂದರೆ 2.21 ಲಕ್ಷ ಕೋಟಿ ರುಪಾಯಿ ಮೊತ್ತದ 38 ಯೋಜನೆಗಳು ಕಬ್ಬಿಣ ಮತ್ತು ಉಕ್ಕು ಉದ್ಯಮದ್ದೆ. ಹೀಗಾಗಿ ಇದನ್ನ Global Investors Meet ( GIM ) ಬದಲು Steel Investors Meet (SIM) ಅಂತ ಟೈಮ್'ಸ್ ಆಫ್ ಇಂಡಿಯಾ ದಿನ ಪತ್ರಿಕೆಯಲ್ಲಿ ಹೇಳಿರುವದು ಸೂಕ್ತವೆ. ನಮಗೆಲ್ಲ ಗೊತ್ತಿರುವ ಹಾಗೆ ಬೇರೆ ಎಲ್ಲ ಉದ್ಯಮಗಳಿಗಿಂತ ಈ ಕಬ್ಬಿಣ ಮತ್ತು ಉಕ್ಕು ಉದ್ಯಮಕ್ಕೆ ಭೂಮಿ,ನೀರು ಹೆಚ್ಚಿಗೆ ಬೇಕು. ಸರಕಾರವೇ ಹೇಳಿರುವ ಹಾಗೆ 1 ಲಕ್ಷ ಎಕರೆ ಜಮೀನನ್ನು ಹೋಶ ಪಡಿಸಿಕೊಳ್ಳಲು ಸಿದ್ದತೆ ನಡಿದಿದೆ . ಈ ಒಂದು ಲಕ್ಷ ಜಮೀನಿನಲ್ಲಿ ಎಷ್ಟು ಎಕರೆ ನೀರಾವರಿ ಹಾಗು ಊಳಲು ಯೋಗ್ಯವಾದ ಭೂಮಿ ಇರುತ್ತೆ ಅನ್ನೋದೇ ಚಿಂತೆ. 2000-01 ರಲ್ಲಿ Ministry of Agriculture ಹೊರಡಿಸಿರುವ ಪ್ರಕಟನೆಯಂತೆ ನಮ್ಮ ರಾಜ್ಯದಲ್ಲಿ ಇರುವ ಒಟ್ಟು ನೀರಾವರಿ ಭೂಮಿ Net Irrigated Area (NIA) 2643 ಸಾವಿರ ಹೆಕ್ಟೇರ್ ಗಳು ಅಂದ್ರೆ ಸುಮಾರು 66 ಲಕ್ಷ ಎಕರೆ ಮತ್ತು ಒಟ್ಟು ಬಿತ್ತಲು ಯೋಗ್ಯವಾಗಿರುವ ಭೂಮಿ Net Sown Area (NSA) 10410 ಸಾವಿರ ಹೆಕ್ಟೇರ್ ಗಳು ಅಂದ್ರೆ ಸುಮಾರು 2 ಕೋಟಿ ಎಕರೆಗೂ ಅಧಿಕ. ಇಷ್ಟು ಭೂಮಿಯಲ್ಲಿ ಈಗಾಗಲೇ ಎಷ್ಟು ಭೂಮಿ ಅಭಿವೃದ್ಧಿ ಹೆಸರಲ್ಲಿ, ರಿಯಲ್ ಎಸ್ಟೇಟ್ ಹೆಸರಲ್ಲಿ, ಭೂ ಮಾಫಿಯ ಹೆಸರಲ್ಲಿ ಕಬಳಿಕೆಯಾಗಿದೆಯೋ ಮತ್ತು ಹೆತೆಚ್ಚವಾಗಿ ಗೊಬ್ಬರ ಮತ್ತು ರಾಸಾಯನಿಕ ಬಳಕೆಯಿಂದ ಎಷ್ಟು ಭೂಮಿ ತನ್ನ ಸಾರವನ್ನು ಕಳೆದುಕೊಂಡು ಊಳಲು ಅಯೋಗ್ಯವಗಿದೆಯೋ ಗೊತ್ತಿಲ್ಲ. ಶೇಕಡಾ 65 ಕಿಂತ ಹೆಚ್ಚಿಗೆ ಜನರು ಇಂದಿಗೂ ಕೃಷಿಯನ್ನೇ ತಮ್ಮ ಬದುಕಾಗಿಸಿಕೊಂದಿದ್ದಾರೆ ಮತ್ತು ಅದರಲ್ಲೇ ಬದುಕುತಿದ್ದಾರೆ. ಇಂತ ಸಂದರ್ಬದಲ್ಲಿ ನಮ್ಮ ಸರಕಾರಗಳು ಕೈಗಾರಿಕೆ ಹೆಸರಲ್ಲಿ ಬೆಳೆಯಲು ಯೋಗ್ಯ ಮತ್ತು ನೀರಾವರಿ ಭೂಮಿಯನ್ನು ಕಿತ್ತುಕೊಂಡು ಬಿಟ್ಟರೆ ನಮ್ಮ ರೈತಾಪಿ ಜನಗಳ ಹೊಟ್ಟೆಯ ಗತಿಯೇನು. ಅಷ್ಟೇ ಅಲ್ಲ ಬೆಳೆ ಕಡಿಮೆ ಆದಂತ ಆಹಾರದ ಉತ್ಪಾದನೆ ಕಡಿಮೆಯಾಗುತ್ತದೆ. ಹೀಗೆ ಮುಂದುವರೆದರೆ ನಾಳೆ ತಿನ್ನಲು ಅಕ್ಕಿಯೂ ಸಿಗದಾದಾಗ ದುಡ್ಡನ್ನು ಇಲ್ಲ ಕಾರ್ಖಾನೆಗಳು ಮತ್ತು ಕಂಪನಿಗಳು ಉತ್ಪದಿಸಿಸುವ ಕಬ್ಬಿಣ, ಉಕ್ಕು ಇಲ್ಲ ಸಾಫ್ಟ್ವೇರ್ ನ ತಿನ್ನೋಕೆ ಆಗುತ್ತಾ?
ನೀತಿ ನಿಯಮಗಲಿಲ್ಲದೆ ಗಣಿಗಾರಿಕೆಗೆ ಪರವಾನಿಗೆ ಕೊಟ್ಟ ಪರಿಣಾಮ ಇವತ್ತು ಬಳ್ಳಾರಿಯಲ್ಲಿ ಅಷ್ಟೇ ಅಲ್ಲ ಗಣಿಯಿಂದ ಎದ್ದ ದೂಳು ಪಕ್ಕದ ಜಿಲ್ಲೆ ರಾಜ್ಯಗಳಿಗೂ ಹರಡಿ ನಮ್ಮ ಜನ ದೂಳನ್ನೇ ತಿಂದು ದೂಳನ್ನೇ ಉಸಿರಾಡುವಂತಾಗಿದೆ. ವೈಜ್ಞಾನಿಕ ವಿಧಿ ವಿಧಾನಗಳೆಲ್ಲವನ್ನು ಗಾಳಿಗೆ ತೊರಿ ಇವತ್ತು ಈ ಕಾರ್ಖಾನೆಗಳು ಹೊರಸೂಸುವ ಆರೋಗ್ಯ ಹಾನಿಕಾರಕ ರಾಸಾಯನಿಕ ವಸ್ತುಗಳು ನಮ್ಮ ಕಾವೇರಿ, ತುಂಗಾ ಭದ್ರ ಮತ್ತು ಕೃಷ್ತ್ನ ಗಳಂತ ನದಿಗಳನ್ನು ಮತ್ತು ಪರಿಸರವನ್ನು ಕಲುಸಿತ ಮಾಡಿವೆ. ರಾಯಚೂರಿನ ಥರ್ಮಲ್ ಪವರ್ ಸ್ಟೇಷನ್ ನಿಂದಾಗಿ ಬೇರೆಲ್ಲ ಜಿಲ್ಲೆಗಳಿಗಿಂತ ಮೂರರಿಂದ ನಾಲ್ಕು ಡಿಗ್ರೀಯಷ್ಟು ಬಿಸಿಲ ಶಾಕ ಹೆಚ್ಚಾಗಿ ದಿನವೂ ಬೆರವುತಿದ್ದೇವೆ. ವಿಪರ್ಯಾಸ ಅಂದ್ರೆ ರಾಜ್ಯಕ್ಕೆ ಬೆಳಕು ಕೊಡೊ ಥರ್ಮಲ್ ಸ್ಟೇಷನ್ ರಾಯಚೂರನ್ನು ಮಾತ್ರ ಸದಾ ಕತ್ತಲಲ್ಲೇ ಇಟ್ಟಿದೆ. ಸರಕಾರಗಳ ತಲೆಯಿಲ್ಲದ ಆದೇಶಗಲಿಂದಾಗಿ ಭೂಮಿ ಕಳೆದುಕೊಂಡು, ಕೈಗಾರಿಕೆ ಗಳ ಮಾಲಿಕರ ಲಾಭದ ಆಶೆಗೆ ನಮ್ಮ ಆರೋಗ್ಯವನ್ನು ಬಲಿಕೊಟ್ಟು ಪ್ರತ್ಯಕ್ಷವಾಗಿ ಪರೋಕ್ಷವಾಗಿ ದಿನವೂ ಸತ್ತು ಬದುವುದುಕಿಂತ ನೇರವಾಗಿ ಒಮ್ಮೆ ನಮ್ಮೆಲ್ಲ ರೈತರನ್ನು ಒಂದು ಮೈದಾನದಲ್ಲಿ ಒಟ್ಟುಗೂಡಿಸಿ ಜಲಿಯನ್ ವಾಲಾಭಾಗ್ ರೀತಿ ಗುಂಡಿಕ್ಕಿ ಕೊಂಡು ಬಿಡಿ, ಇಲ್ಲ ಮುಂಬೈ ದಾಳಿಯ ರೀತಿ ಸಿಕ್ಕ ಸಿಕ್ಕವರನ್ನು ಬಂದೂಕಿನಿಂದ ಸುಟ್ಟು ಬಿಡಿ. ಸಾಯುವ ಅರೆಗಳಿಗೆಯಲ್ಲಿ ನಮ್ಮನ್ನು ಭಾರತಿಯ ಬ್ರಿಟಿಶ್ ಸರಕಾರ ಕೊಂದಿತು ಎಂದೋ ಅಥವಾ ಪಾಕಿಸ್ತಾನ್ ಉಗ್ರರಂತೆ ನಮ್ಮ ಸರಕಾರ ನಮ್ಮನ್ನೇ ಕೊಂದಿತೆಂದು ಶಪಿಸಿ ಸಾಯಿತ್ತಾರೆ. ಅನಂತರ ಅವರ ಸಮದಿಗಳ ಮೇಲೆ ನಿಮ್ಮ ಕೈಗಾರಿಕೆಯ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಬಹುದು.
ನಾವ್ಯಾರೂ ಕೈಗಾರಿಕಾ ವಿರೋಧಿಗಲ್ಲ, ಆದರೆ ಕೈಗಾರಿಕೆ ಹೆಸರಲ್ಲಿ ರೈತನ ಹೊಟ್ಟೆ ಮೇಲೆ ಹೊಡೆಯೋದು ಎಷ್ಟು ಸರಿ? ರೈತನ ಮಗನಾಗಿ, ರೈತರ ಕಷ್ಟ ಸುಖಗಳನ್ನು ಆಳವಾಗಿ ಅರಿತಿರುವ ನಮ್ಮ ಮುಖ್ಯ ಮಂತ್ರಿಗಳು ಬಂಡವಾಳ ಹೂಡುವವರಿಗೆ ರತ್ನ ಗಂಬಳಿ ಹಾಸುವ ಅರತುರಿಯಲ್ಲಿ ನಮ್ಮ ರೈತರ ಹಿತಸ್ತಕ್ತಿ ಮರೆಯದಿರಲಿ. ಫಲವತ್ತಾದ ನೀರಾವರಿ ಮತ್ತು ಊಳಲು ಯೋಗ್ಯವಾದ ಭೂಮಿಯನ್ನು ರೈತರಿಂದ ಕಿತ್ತಿಕೊಂಡು ಅವರನ್ನು ಸಾವಿನ ನೇಣು ಕಾಣಿಕೆಗೆ ದೂಕದಿರಲಿ. ನಾಲ್ಕು ಲಕ್ಷ ಕೋಟಿ ರುಪಾಯಿ ವ್ಯಹಾರದ ಗುಂಗಲ್ಲಿ ಆರು ಕೋಟಿ ಕನ್ನಡಿಗರ ಜೀವನದ ದೀಪ ಆರಿಸದಿರಲಿ. ವಿವೇಚನೆಯ ನಿರ್ಧಾರಗಳನ್ನು ತೆಗೆದುಕೊಂಡು ರೈತರನ್ನೂ ಕಾಪಾಡಿ, ಕೈಗಾರಿಕೆ ಬೆಳೆಯಲು ಅನುವು ಮಾಡಿಕೊಡಿ.
No comments:
Post a Comment