Saturday, November 13, 2010

ನೀನೊಂದು ಯಕ್ಷ ಪ್ರಶ್ನೆ ಗೆಳತಿ ನನಗೆ




ಬದುಕು ಬೇಡವೆಂದು ಬಲಗಾಲಿನಿಂದ ಒದ್ದಾಗ
ಬಿದ್ದು ಒದ್ದಾಡುತಿದ್ದ ನನ್ನ ಮುದ್ದು ಮಾಡಿ ಎಬ್ಬಿಸಿದವಳು ನೀನು
ಎದ್ದವನು ಗೆದ್ದು ಮೆರೆವ ಹೊತ್ತಿಗೆ ಸದ್ದೇ ಮಾಡದೆ ಸರಿದು ಹೋದೆ ಎಲ್ಲಿಗೆ?

ಸವಿಗನಸು ಕಾಣುವ ಕಣ್ಣಿಗೆ ಕಾರಿದ ಪುಡಿ ಎರಚಿ
ಮಕಾಡೆ ಮಲಗಿಸಿತ್ತು ಈ ಸಾವಿಲ್ಲದ ಸಮಯ
ಸಮಯಕ್ಕೆ ಸಡ್ಡು ಹೊಡೆದು ದಿಕ್ಸೂಚಿಯಾದವಳು ದಿಗಂತವನ್ನೇಕೆ ದಾಟಿ ಹೋದೆ?

ಕುಣಿವ ಕಾಂಚಾಣ ಕೈಯಲ್ಲಿದ್ದಾಗ ಮನೆ ತುಂಬಾ ಬಂದುಗಳು
ಕಾಂಚಾಣ ಕೈ ಕೊಟ್ಟು, ಬಂದು ಬಳಗವೆಲ್ಲ ಬಾಯಿ ತೆರೆದು ಹುಗಿತಿರುವಾಗ
ನನ್ನಲ್ಲಿ ಹುದುಗಿದ್ದ ಶಕ್ತಿಯೆಲ್ಲ ಒಗ್ಗೂಡಿ ಹೋರಾಟದ ಕಿಚ್ಚು ಹಚ್ಹ್ಚಿದವಳು ಹೊರಟೆ ಎಲ್ಲಿಗೆ?

ಜಗತ್ತು ಜಾಲಿ ಕಲ್ಲಿನಿಂದ ಹುಚ್ಚನೆಂದು ಹೊಡಿಯುತ್ತಿರುವಾಗ
ನೀರು ನೆರಳಿಲ್ಲದೆ ನರಳಿ ನರಳಿ ಸಾಯುವಾಗ
ಪ್ರೀತಿಯ ಗುಟುಕು ಕೊಟ್ಟು ಜೀವಕೆ ಜೀವ ಕೊಟ್ಟವಳು ಜೀವನದಲ್ಲಿ ಜೋತೆಯಾಗಲಿಲ್ಲ ಯಾಕೆ?
ರಾಜಶೇಕರಗೌಡ ಹೊತುರ್
Mobile: 7760961477

No comments:

Post a Comment