Sunday, September 19, 2010

ಆ ಕೆಂಪು ಮೂಗು

ಹೇ ಮುದ್ದು ಕೋತಿ,

ಹೇಗಿದ್ದೀಯ? ಇನ್ನೂ ನಿನ್ನ ಮೂಗು ಕೆಂಪಗೆ ಇದೆಯಾ? ಅಥವಾ ಜ್ವರ ಕಡಿಮೆ ಆಗಿ ಬಿಳಿಯಾಗಿದೆಯಾ?
ನಿಜ ಹೇಳಲಾ ಚಿನ್ನ, ಕಳೆದ ಮೂರು ದಿನದಿಂದ ನಾನು ನಾನಗೆ ಇಲ್ಲ, ಸರಿಯಾದ ಸಮಯಕ್ಕೆ ಊಟ, ನೀಟಾಗಿ ತೊಳೆದ ಬಟ್ಟೆ, ಇನ್ ಟೈಮ್ ನಲ್ಲಿ ಆಫೀಸ್ ನಲ್ಲಿ ಇರೋ ಶಿಸ್ತಿನ ಶಿಪಾಯಿ ಅಂತ ಕರಿತಿದ್ದೆಯಲ್ಲ ನೀ ನನ್ನ, ಈಗ ನನ್ನ ಸ್ಥಿತಿ ನೋಡಿದರೆ ನೀನು ಎದೆ ಒಡೆದು ಸತ್ತೆ ಹೋಗ್ತೀ ಏನೋ. ಯಾಕೋ ಗೊತ್ತಿಲ್ಲ ಕಣೆ ನೀನು ನಿಂಗೆ ಜ್ವರ ಬಂದಿದೆ ಅಂತ ಮೆಸೇಜ್ ಮಾಡಿದಾಗಿನಿಂದ ನಿನ್ನ ಬಿಟ್ಟು ಬೇರೆ ಏನೂ ಯೋಚೆನೆ ಮಾಡೋಕೆ ಆಗ್ತಾ ಇಲ್ಲ. ನಿಂಗೊತ್ತಾ ನಾನು ನನ್ನ ವಿದೇಶಿ ಸಹೋದ್ದೋಗಿಗಳ ಜೊತೆ ಪ್ರಾಜೆಕ್ಟ್ ಬಗ್ಗೆ ಚರ್ಚೆ ಮಾಡ್ತಾ ಇದ್ದಾಗ ನಿನ್ನ ಮೆಸೇಜ್ ಬಂತು, ಒಂದು ಕ್ಷಣ ಬೆವತು ಹೋಗಿ ಏನೂ ಮಾಡಬೇಕು ಅಂತ ತೋಚದೆ ಆ ಮೀಟಿಂಗ್ ಅರ್ಧದಲ್ಲೇ ಬಿಟ್ಟು ಹೊರನಡೆದೆ. ಅದರಿಂದಾಗಿ ಒಂದು ಲಕ್ಷ ಡಾಲರ್ ಕಿಮ್ಮತ್ತಿನ ಪ್ರಾಜೆಕ್ಟ್ ನಮ್ಮ ಕಂಪನಿಯ ಕೈ ಬಿಟ್ಟು ಹೋಯ್ತು, ಮ್ಯಾನೆಜೆರ್ ನನ್ನ ಬೇರೆ ಡಿಪಾರ್ಟ್ಮೆಂಟ್ ಗೆ ವರ್ಗ ಮಾಡಿದ್ದಾನೆ, ಚಿಂತೆ ಇಲ್ಲ ಚಿನ್ನ ನಿನ್ನ ಮುಂದೆ ಈ ಪ್ರಾಜೆಕ್ಟ, ಆ ಕೆಲಸ ಏನು ದೊಡ್ದದಲ್ಲ ಬಿಡು.
ಒಂದಂತೂ ಸತ್ಯ ಕಣೆ, ಮೀಟಿಂಗ್ ಅರ್ಧದಲ್ಲೇ ಬಿಟ್ಟು ನಿನ್ನ ರೂಮಿಗೆ ಬರುವಷ್ಟರಲ್ಲ್ಲಿ ಸಂಜೆ ಸೂರ್ಯ ಮುಳುಗಿ ಗಂಟೆ ಎಂಟಾಗಿತ್ತು. ನೀನು ಆಗಲೇ ಗುಳಿಗೆ, ಟಾನಿಕ್, ಜಂಡೂಭಾಂ ಜೊತೆ ಮಲಗಿದ್ದೆ. ನಿನ್ನ ಹಣೆಗೆ ಕೈಯಿಟ್ಟರೆ ಕೆಂಡದಂತ ಬಿಸಿ, ಗಡ ಗಡ ನಡುಗಿ ನೀ ಮಲಗಿದ ಮಂಚದ ಮೇಲೆ ಕುಳಿತು ನಿನ್ನ ಒಮ್ಮೆ ಗಟ್ಟಿಯಾಗಿ ಎದೆಗಪ್ಪಿಕೊಂಡೆ, ಹೆನ್ನಪ್ಪಿಯಂತೆ ಗಳ ಗಳ ಅಂತ ಅಳಲಿಲ್ಲವದರೂ ನಂಗೆ ಗೊತ್ತಿಲ್ಲದೇ ನನ್ನ ಕಣ್ಣಿಂದ ಎರಡು ಹನಿ ಉದುರಿತ್ತು, ರಾತ್ರಿ ಪೂರ ನಿನ್ನ ತಲೆ ನೀವುತ್ತ, ತಣ್ಣೀರು ಬಟ್ಟೆ ಹಾಕುತ್ತ, ನನ್ನ ಎದೆಮೇಲೆ ಮಲಗಿಸಿಕೊಂಡು ಮುಂಜಾನೆವರೆಗೆ ನಿನ್ನ ಎಚ್ಚರಕ್ಕೊಸರ ಕಾಯುತ್ತ ಇದ್ದೆ. ನೀನು ಎದ್ದು ನನ್ನ ಎದೆಯ ಶರ್ಟ್ ಗುಂಡಿನನ್ನಿ ಸಿಕ್ಕಿ ಹಾಕಿಕೊಂಡಿದ್ದ ನಿನ್ನ ಉದ್ದದ ಕೊದಲ್ಲನ್ನು ಬಿಡಿಸಿಕೊಂಡು ಮೆಲ್ಲನೆ ನಗುತ್ತ ನನ್ನ ಕೆನ್ನೆ ಚೂಟಿದಾಗಲೇ ನಾ ಈ ಜಗತ್ತಿಗೆ ಬಂದಿದ್ದು, ರಾತ್ರಿ ಊಟ ಮಾಡದೇ ನಿದ್ದೆ ಇಲ್ಲದ ನಿನ್ನ ಪಕ್ಕದಲ್ಲೇ ಮಲಗಿದ್ದೆ ಅಂತ ಗೊತ್ತಾಗಿದ್ದು. ನಿನ್ನ ಮುಖ ಮೊದಲಿನ ತರಾ ಕಿಲ ಕಿಲ ಅಂತ ಇರ್ಲಿಲ್ಲ ಆದರೋ ಆ ಸಣ್ಣ ನಗು ನೋಡಿ ಸಣ್ಣಗೆ ಸಮಾದಾನ ಆಯ್ತು. ಪ್ರೀತಿಸಿದವಳನ್ನು ರಾತ್ರಿ ಪೂರ್ತಿ ಎದೆ ಮೇಲೆ ಮಲಗಿಸಿಕೊಂಡು ಹಾರೈಕೆ ಮಾಡಿದ ಆ ಅನುಭವ ಏನೋ ಒಂದು ತರಾ ಕುಶಿ ಕೊಡ್ತಾ ಇತ್ತು, ಹಾಗೆ ನಂಗೂಸ್ಕರ ಒಂದು ಜೀವ ಇದೆ ಅಂತ ನನ್ನೊಳಗೆ ನಾನೇ ಬೆನ್ನು ತಟ್ಟಿಕೊಳ್ಳುತ್ತ ಇನ್ನು ಮುಂದೆ ಜೀವನದಲ್ಲಿ ಜವಬ್ದಾರಿಯಿಂದ ನಡೀಬೇಕು ಅಂತ ಅನ್ನುಸೋಕೆ ಸುರುವಾಯ್ತು. ಅದೇನೋ ಗೊತ್ತಿಲ್ಲ ಕಣೆ ಹಿಂದೆಲ್ಲ ಈ ಗುಳಿಗೆ, ಟಾನಿಕ್, ಜಂಡೂಭಾಂ ವಾಸನೆ ಕಂಡರೆ ವಾಕರಿಕೆ ಬರ್ತಾ ಇತ್ತು , ಅಜ್ಜಿ ತನ್ನ ಕಾಲಿಗೆ ಜಂಡೂಭಾಂ ಅಚ್ಚಿಕೊಂಡು ಕೊತಿದ್ದರೆ ಅವಳ ಹತ್ತಿರ ಕೂಡ ಹೋಗ್ತಾ ಇರ್ಲಿಲ್ಲ, ಆದ್ರೆ ನಿನ್ನ ತಲೆಗೆ ನಾನೇ ಜಂಡೂಭಾಂ ಹಚ್ಚಿ ಎದೆಮೇಲೆ ಮಲಗಿಸಿಕೊಂದೊದ್ದರೂ ನಂಗೆ ಏನೂ ಅನ್ನಿಸಲೇ ಇಲ್ಲ. ನೆನೆಸಿಕೊಂಡರೆ ನಂಗೆ ನಗು ಬರ್ತಾ ಇದೆ ಪ್ರೀತಿಯಂದರೆ ಇದೇನಾ ಅಂತ. ಅಲ್ಲಿವರೆಗೆ ಟೆನ್ಶನ್ನಲ್ಲಿ ಇದ್ದ ನಂಗೆ ಒಮ್ಮ್ಲೆಗೆ ಹೊಟ್ಟೆ ಹುನ್ನಗುವಸ್ಟು ನಗು ಬಂದಿದ್ದು ನಿನ್ನ ಆ ಕೆಂಪು ಮೂಗು ನೋಡಿ. ನಿಂಗೆ ಜ್ವರ ಬಂದಾಗ, ನೆಗಡಿ ಆದಗ ಮೂಗು ಕೆಂಪಗೆ ಆಗುತ್ತಲ್ಲ, ಅದು ನಿಂಗೆ ಮುಜುಗರ ತಂದರೂ ನಂಗೆ ನೀ ಸುಂದರವಾಗೇ ಕಾಣುತ್ತೀಯ ಕಣೆ.
ಅಲ್ಲಿವರೆಗೋ ಇದ್ದ ಆ ಸಮಾದಾನ, ನಗು, ಆ ಫೀಲಿಂಗ್ ಒಮ್ಮೆಗೆ ಚೂರು ಚೂರು ಆಗಿದ್ದು ನಿನ್ನ ತಂದೆ ನಿನ್ನನ್ನು ಊರಿಗೆ ಕರೆದುಕೊಂಡು ಹೋಗಲು ಬಂದಾಗ. ವಲ್ಲದ ಮನಸ್ಸಿಂದ ನೀನು ಹೊರಡಲು ನಿಂತಿದ್ದೆ, ಇಲ್ಲದ ಮನಸ್ಸಿಂದ ಕಳಿಸಲು ನಾನು ಕುಳಿತಿದ್ದೆ. ಇವತ್ತಿಗೆ ನೀನು ನಿನ್ನೂರು ಸೇರಿ ಒಂದು ವಾರ ಕಳೆಯಿತು ಚಿನ್ನ, ಒಂದು ಕಾಲ್ ಇಲ, ಮೆಸೇಜ್ ಇಲ್ಲ, ನೀನಿಲ್ಲದೆ ನಿನ್ನ ನೆನಪಿನ ಜೊತೆ ಜೋಕಾಲಿ ಆಡಿ ಸಾಕಾಯ್ತು ಕಣೆ. ಬೇಗ ಬಾ, ಕಡೆ ಪಕ್ಷ ಕಾಲ್ ಮಾಡು, ನಿನ್ನ ಮೂಗು ಹೇಗಿದೆ ಅಂತ ತಿಳಿಸು. ನಿನಗೋಸ್ಕರ ಕಾದಿರುವ ನಿನ್ನ ಹುಡುಗ.


-Rajashekara Gouda
rjgouda@gmail.com
7760961477

No comments:

Post a Comment