
ನಾನೇ ನೀನು ನೀನೆ ನಾನು
ನಿಜ ಹೇಳ್ಲ ಗೌರಿ,
ನಿನ್ನನ್ನೆಂದು ನಾ ಪ್ರಿತಿಸಲೇ ಇಲ್ಲ.
ಹೃದಯ ರಕ್ತ ಎಂದಾದರೂ ಹೇಳಿವೆಯಾ ಒಂದಕ್ಕೊಂದು ಪ್ರೀತಿಸುತ್ತೆವೆಂದು?
ಹಗಲು ರಾತ್ರಿ ಎಂದಾದರೂ ಹೇಳಿವೆಯಾ ಒಂದಕ್ಕೊಂದು ಪ್ರೆಮಿಸುತ್ತೆವೆಂದು?
ಭೂಮಿ ಬಾನು ಎಲ್ಲಿಯಾದರೂ ಬರೆದಿವೆಯಾ ಒಂದಿಲ್ಲದೆ ಏನೂ ಇಲ್ಲ ಎಂದು?
ನಿನ್ನನ್ನೆಂದು ನಾ ಪ್ರಿತಿಸಲೇ ಇಲ್ಲ
ನನ್ಗೊತ್ತಿರೋದು ಒಂದೇ,ಇಲ್ಲಿ ನಾನು ನೀನು ಅನ್ನೋದೇ ಇಲ್ಲ
ಯಾಕಂದ್ರೆ ನಿನ್ನಿಲ್ಲದೆ ನಾನಿಲ್ಲ ಕಣೆ.
ನಿಜ ಹೇಳ್ಲ ಗೌರಿ,
ನಿನ್ನನ್ನೆಂದು ನಾ ಪ್ರೇಮಿಸಲೇ ಇಲ್ಲ.
ಕೆನೆ ಹಾಲಿನಿಂದ ಹುಟ್ಟಿದರೂ ಹೆಲೆಂದಾದರು ಹೇಳಿದೆಯ ನನ್ನಿಂದ ನೀನು ಎಂದು
ಜೇನಹನಿ ಗೂಡಿನಲ್ಲಿ ಬೆಳೆದರೂ ಗೂಡು ಎಂದಾದರು ಕೇಳಿದೆಯ ನನ್ನಿಂದ ನೀನು ಎಂದು
ಬೂದಿ ಬೆಂಕಿಯಿಂದ ಬಂದರು ಬೆಂಕಿ ಎಲ್ಲಾದರೂ ಬೆರಳು ಮಾಡಿ ತೋರಿಸಿದೆಯ ನಾನಿಲ್ಲದೆ ನೀನಿಲ್ಲ ಎಂದು
ನಿನ್ನನ್ನೆಂದು ನಾ ಪ್ರೇಮಿಸಲೇ ಇಲ್ಲ
ನನ್ಗೊತ್ತಿರೋದು ಒಂದೇ,ಇಲ್ಲಿ ನೀನು ಬರುಕಿರುವದಕ್ಕೆ ನನ್ನ ಬದುಕಿದೆ.
ಯಾಕಂದ್ರೆ ನಿನ್ನಿಲ್ಲದೆ ನಾನಿಲ್ಲ ಕಣೆ.
--ರಾಜಶೇಕರಗೌಡ ಹೊತುರ್
ಬಾಗಲವಾಡ
rjgouda@gmail.com
7760961477
ಹೌದು..ಪ್ರೀತಿಯ ನಿವೇದನೆಗೆ ಎರಡು ಮನಸುಗಳಿದ್ದರೆ ಸಾಕು.. ಪ್ರೀತಿಸಿದವರ ಜೊತೆ ಇದ್ದರೆ ಸಾಕು..ಮಾತುಗಳು ಬೇಕಿಲ್ಲ..
ReplyDelete