Thursday, September 30, 2010

ಗೆಳತಿ ಪ್ರೀತಿಸು ನನ್ನ


ಗೆಳತಿ ಪ್ರೀತಿಸು ನನ್ನ

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ನಾನೇನು ಆ ಬೆಳದಿಂಗಳು ಸುರಿಸೋ ಚಂದಿರನನ್ನು
ಹಿಡಿದು ನಿನ್ನ ತಲೆಯಲ್ಲಿ ಕಂಪು ಸೂಸೋ ಮಲ್ಲಿಗೆ ಹೂವಾಗಿಸಿ ಮುಡಿಸಲಾರೆ
ಆದರೆ ನನ್ನ ಜೀವನದ ಕಟ್ಟ ಕಡೆ ಗಳಿಗೆಯವರೆಗೆ ನಿನ್ನ ಪ್ರತಿ ಹೆಜ್ಜೆಗೆ
ಕಮಲದ ದಳಗಳನ್ನು ಹಾಸಿ ಪ್ರೀತಿಸುವೆ.

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ಹರಿಯೋ ಜಲಪಾತವನ್ನು ಹಿಡಿದು ಮಡಿಸಿ ನಿನ್ನ ಬಳುಕುವ
ಬಳ್ಳಿಯಂತ ದೇಹಕ್ಕೆ ಸೀರೆಯಾಗಿಸಿ ಉಡಿಸಲಾರೆ
ಆದರೆ ನನ್ನ ಎದೆಯ ಕೊನೆ ಉಸಿರಿರುವವರೆಗೆ ಕೆನೆಯಷ್ಟು ಮೃದುವಾಗಿರುವ
ನಿನ್ನ ಚರ್ಮಕ್ಕೆ ಹೊಂಗಿರಣವೂ ಚುಚ್ಚಿ ನೋಯಿಸದಂತೆ ಪ್ರೆಮಿಸುವೆ.

ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

ಮಜ್ನುನಂತೆ ಇತಿಹಾಸ ಬರೆವಷ್ಟು ಪ್ರೀತಿಸಲಾರೆ,
ಶಹಜಾನ್ ನಂತೆ ತಾಜ್ಮಹಲ್ ಕಟ್ಟಿ ಎಷ್ಟು ಪ್ರೀತಿಸುತಿದ್ದೆ ಅಂತ ಜಗತ್ತಿಗೆ ತೋರಿಸಲಾರೆ
ಆದರೆ ನೀನು ಎಂಬತ್ತು ವಯಸ್ಸಿನ ಮುದಿಕಿಯಾಗಿ, ಮುಖವೆಲ್ಲ ಸುಕ್ಕುಗಟ್ಟಿ
ನಡೆಯಲು ಆಸರೆ ಬೇಕು ಅಂದಾಗ ನಿನ್ನನ್ನು ನನ್ನೆದೆಗೆ ಗಟ್ಟಿಯಾಗಿ ಅಪ್ಪಿಕೊಂಡು ಮುನ್ನಡೆಸುವೆ.

ಗೆಳತಿ, ಒಮ್ಮೆ ಹೇಳು ಗೆಳತಿ ನೀ ನನ್ನ ಪ್ರೀತಿಸುವೆ ಎಂದು

--ರಾಜಶೇಕರಗೌಡ ಹೊತುರ್
ಬಾಗಲವಾಡ
rjgouda@gmail.com
7760961477

No comments:

Post a Comment